ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸೈಲೆಂಟ್ ಆಗಿ ಇರಬಾರದು. ಉಗ್ರವಾಗಿ ವರ್ತಿಸಿದರೆ ಮಾತ್ರ ಅವರಿಗೆ ಉಳಿಗಾಲ. ಇಲ್ಲದಿದ್ದರೆ ನಿಮ್ಮನ್ನು ರಾಜಕೀಯವಾಗಿ ಮುಗಿಸುತ್ತಾರೆ ಎನ್ನುವ ಮೂಲಕ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ.
ಪೋಷಕರೇ ಹುಷಾರ್: ಸಣ್ಣ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಉಸಿರಾಟದ ತೊಂದರೆ!
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಾಣದ ವಿಚಾರದಲ್ಲಿ ಡಿಕೆಶಿ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಟ್ಟಿದ್ದಾರೆ. ಇದನ್ನ ವೇದಿಕೆಯಲ್ಲಿಯೇ ಪ್ರಶ್ನಿಸಿದ ಸತೀಶ ಜಾರಕೊಹೊಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. 2013-18ರಲ್ಲಿ ನಾನು ಕಾಂಗ್ರೆಸ್ ಶಾಸಕ. ಆಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಹೈಕಮಾಂಡ್ ಮತ್ತು ರಾಜ್ಯದ ಜನತೆ ಮುಂದೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಮೊದಲ ಬಾರಿಗೆ ಹೇಳಿದಾಗ ಹಾಳಾಗಿ ಹೋಗಲಿ ಅಂತ ಸತೀಶ್ ಜಾರಕಿಹೊಳಿ ಸುಮ್ಮನಿದ್ದರು. ಆದರೆ, ಮತ್ತೆ ಡಿಸಿಎಂ ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಸತೀಶ ಜಾರಕಿಹೊಳಿ ವಿರೋಧಿಸಿ ಡಿಸಿಎಂ ಅವರ ಕೈಯಲ್ಲಿದ್ದ ಮೈಕ್ ಇಸಿದುಕೊಂಡು ಮಾತಾಡಿದ್ದಾರೆ. ಅದಕ್ಕೆ ನಾನು ಸತೀಶ ಜಾರಕಿಹೊಳಿ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ವಿರೋಧ ಮಾಡುವ ಸಂದರ್ಭದಲ್ಲಿ ವಿರೋಧಿಸುವ ಶಕ್ತಿ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಿರೋಧಿಸುವ ಶಕ್ತಿಯನ್ನು ಸತೀಶ್ಗೆ ಕೊಡಲಿ ಅಂತಾ ಲಕ್ಷ್ಮೀತಾಯಿ ದೇವರಲ್ಲಿ ಬೇಡಿಕೊಳ್ಳುವೆ ಎನ್ನುವ ಮೂಲಕ ಸಹೋದರನ ಪರ ರಮೇಶ ಜಾರಕಿಹೊಳಿ ಬ್ಯಾಟಿಂಗ್ ಬೀಸಿದರು.