ಕೊಪ್ಪಳ ಗವಿಸಿದ್ದೇಶ್ವರನ ತೇರು ನೋಡಲು ಭಕ್ತಸಾಗರ ಹರಿದು ಬಂದಿದೆ. ಗವಿಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿ ಭಕ್ತರ ಸಾಗರದ ಜಯಘೋಷದ ನಡುವೆ ಗವಿಸಿದ್ದೇಶ್ವರ ಮಹಾರಥೋತ್ಸವ ಜರುಗಿತು.
ಪೋಷಕರೇ ಹುಷಾರ್: ಸಣ್ಣ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಉಸಿರಾಟದ ತೊಂದರೆ!
ರಥೋತ್ಸವಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕ ಪಂಡಿತ್ ಡಾ.ವೆಂಕಟೇಶ ಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಷಟಸ್ಥಲ ಧ್ವಜ ಏರುತ್ತಿದ್ದಂತೆಯೇ ಲಕ್ಷಾಂತರ ಭಕ್ತರು `ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಎಂದು ಘೋಷಣೆ ಕೂಗುವ ಮೂಲಕ ರಥ ಎಳೆದರು. ಭಕ್ತ ಸಾಗರದ ನಡುವೆ ಮಹಾರಥ ರಾಜ ಗಾಂಭೀರ್ಯದಲ್ಲಿ ಮುಂದೆ ಸಾಗಿತು. ರಥದ ಸುತ್ತಲೂ ಸೇರಿದ್ದ ನಾಡಿನ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥೋತ್ಸವ ಸಾಗುವ ದೃಶ್ಯ ಭಕ್ತಿ ಭಾವದಿಂದ ಕಣ್ತುಂಬಿಕೊಂಡರು. ರಥದ ಕಳಶಕ್ಕೆ ಉತ್ತತ್ತಿ ಎಸೆಯುವ ಮೂಲಕ ಧನ್ಯತೆ ಮೆರೆದರು
ಮೊದಲು ಗವಿಮಠದ ಗದ್ದುಗೆಯಿಂದ ಉತ್ಸವ ಮೂರ್ತಿಯನ್ನು ಭಕ್ತಗಣದ ನಡುವೆ ಮಹಾರಥೋತ್ಸವಕ್ಕೆ ತರಲಾಯಿತು. ನಂದಿ ಕೋಲು ಸೇರಿ ನಾನಾ ಸಾಂಪ್ರದಾಯಿಕ ಕಲಾ ತಂಡಗಳು ಸಾಥ್ ನೀಡಿದ್ದವು. ನಂತರ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭಾರಿ ಬಂದೋಬಸ್ ಲ್ಲಿ ಮಹಾರಥೋತ್ಸವದ ಬಳಿಗೆ ತೆರಳಿ, ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದರು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾ ಸ್ವಾಮೀಜಿ ಸೇರಿ ನಾಡಿನ ನಾನಾ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಅಗಮಿಸಿದರು.