ಪೋಷಕರೇ ಚಳಿಗಾಲ ಹೀಗಾಗಲೇ ಶುರುವಾಗಿದೆ. ಈ ಸಮಯದಲ್ಲಿ ಮಕ್ಕಳ ಮೇಲೆ ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ.
ಚಳಿಗಾಲದ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಉಬ್ಬಸ ಸಮಸ್ಯೆಯು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಹವಾಮಾನದಲ್ಲಿ ಏರುಪೇರು ಕಂಡುಬರುತ್ತಿದೆ. ಇದರಿಂದ ಮಕ್ಕಳಿಗೆ ಬಹುಬೇಗನೆ ವೈರಲ್ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ಉಬ್ಬಸ, ಅಸ್ತಮಾ, ಶ್ವಾಸಕೋಶ ಸಂಬಂಧಿತ ಮತ್ತು ಇತರೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಾನು 1.27 ಕೋಟಿ ನೀಡಿದ್ದೇನೆ: ರಮೇಶ್ ಜಾರಕಿಹೊಳಿ!
ಆಶ್ಚರ್ಯಕರ ಸಂಗತಿಯೆಂದರೆ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ 3ರಿಂದ 6 ತಿಂಗಳ ವಯಸ್ಸಿನ ಶಿಶುಗಳಲ್ಲಿ ಕಂಡುಬರುತ್ತಿರುವುದು. ಈ ಸಮಸ್ಯೆಯಿಂದ ದೂರವಿರಲು ಪೋಷಕರು ಆದಷ್ಟು ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗದಿರುವುದು ಒಳಿತು. ಮನೆಯಲ್ಲಿ ಮಕ್ಕಳಿರುವ ಪೋಷಕರು ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವ ಮೂಲಕ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರು.
ಚಿಕ್ಕ ಮಕ್ಕಳಲ್ಲಿ ಬ್ರಾಂಕೈಟಿಸ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಬಹುತೇಕ ಮಕ್ಕಳಲ್ಲಿ ವೈರಲ್ ಸೋಂಕಿನಿಂದ ಅಥವಾ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುವ ಮೂಲಕ ಮತ್ತು ಈಗಾಗಲೆ ಈ ಸೋಂಕಿಗೆ ತುತ್ತಾದ ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಕುಟುಂಬದಲ್ಲಿ ಯಾರಾದರು ಅಸ್ತಮಾ ಹೊಂದಿದ್ದರೂ ಕೂಡ ಮಕ್ಕಳು ಬಹು ಬೇಗ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಧೂಳು ಮತ್ತು ವೈರಲ್ ಸೋಂಕುಗಳಿಂದಲೂ ಮಕ್ಕಳಲ್ಲಿ ಅಸ್ತಮಾ ಕಂಡುಬರಬಹುದು. ಹಾಗಾಗಿ ಪೋಷಕರು ಎಚ್ಚರದಿಂದಿರಿ.