ಕೊಪ್ಪಳ:- ಯಡಿಯೂರಪ್ಪರ ಬಗ್ಗೆ ಮಾತಾಡಿದ್ರೆ ಜಾರಕಿಹೊಳಿ ಹೊರಗಡೆ ತಿರುಗಾಡೋದು ಕಷ್ಟವಾಗತ್ತೆ ಎಂದು ಹೇಳುವ ಮೂಲಕ ಬಿವೈ ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಬಿಎಸ್ ಯಡಿಯೂರಪ್ಪ ಮತ್ತು ತಮ್ಮ ಬಗ್ಗೆ ಬೆಳಗಾವಿಯಲ್ಲಿ ಹಗುರವಾಗಿ ಮಾತಾಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಕಿ ಕಾರಿದರು.
ಯಡಿಯೂರಪ್ಪ ಈ ನಾಡು ಕಂಡ ಅಪ್ರತಿಮ ಹೋರಾಟಗಾರ, ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿಹಳ್ಳಿ ಸುತ್ತುತ್ತ ಪಕ್ಷ ಸಂಘಟನೆ ಮಾಡಿದ್ದಾರೆ, ಅವರ ಬಗ್ಗೆ ಹಗುರವಾಗಿ ಮಾತಾಡಿದರೆ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತದೆ ಮತ್ತು ಜಾರಕಿಹೊಳಿ ಹೊರಗಡೆ ತಿರುಗಾಡುವುದು ಕಷ್ಟವಾದೀತು ಎಂದು ಹೇಳಿದರು.