ರಾಮನಗರ:- 36 ವರ್ಷದ ಆಂಟಿ ಜೊತೆ 27ರ ಯುವ ವೈದ್ಯನ ಕುಚುಕುಚು ನಡೆಸಿದ್ದು, ಪೊಲೀಸರಿಗೆ ಈ ಪ್ರಕರಣ ತಲೆ ನೋವಾಗಿದ್ದಂತು ನಿಜ.
ಮಜಾ ಕೊಡಲು ಬರ್ತಿದೆ ಮಜಾ ಟಾಕೀಸ್: ಹಿರಿದಾಯ್ತು ತಂಡ, ಯಾವೆಲ್ಲಾ ಆ್ಯಕ್ಟರ್ಸ್ ಬರ್ತಿದ್ದಾರೆ!?
ಇದೀಗ ಯುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಡ್ರಾಪ್ ಪ್ಲೀಸ್ ಎಂದ ಮಹಿಳೆಯನ್ನು ಯುವ ವೈದ್ಯನೋರ್ವ ಬೈಕ್ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿಕೃತವಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ.
ಇದಕ್ಕೆ ಪ್ರತಿಯಾಗಿ ಯುವ ವೈದ್ಯ ಸಹ ಮಹಿಳೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಸಂಬಂಧಿಕರ ಮನೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದರು. ರಾತ್ರಿ 9 ಗಂಟೆಯಾದ್ರೂ ಬಸ್ ಸಿಗದ ಕಾರಣ ಬೈಕ್ ಸವಾರನನ್ನು ತಡೆದು ಡ್ರಾಪ್ ಕೇಳಿದ್ದಾಳೆ. ಈ ವೇಳೆ 36 ವರ್ಷದ ಮಹಿಳೆಯನ್ನು ತನ್ನ ಬೈಕಿನಲ್ಲಿ ಡ್ರಾಪ್ ನೀಡುವ ವೇಳೆ ಎಲ್ಲಿಗೆ ಹೋಗಬೇಕು ಎಂದು 27 ಯುವ ವೈದ್ಯ ಕೇಳಿದ್ದಾನೆ. ಆಗ ಆ ಮಹಿಳೆ ನನಗೆ ಕುಂಬಳಗೋಡು ಬಿಡಿ ಎಂದು ಹೇಳಿದ್ದಾಳೆ. ಈ ವೇಳೆ ಕೆಂಗೇರಿ ಕಡೆ ಹೋಗ್ತಾ ಇದೀರಾ, ಹಾಗಾದ್ರೆ ಕೆಂಗೇರಿಯೇ ಬಿಟ್ಟುಬಿಡಿ ಎಂದು ಮಹಿಳೆ ಹೇಳಿದ್ದಾಳಂತೆ. ಈ ವೇಳೆ ಕೆಂಗೇರಿ ಕಡೆ ಹೋಗದೇ ಅಡ್ಡ ದಾರಿಯಲ್ಲಿ ಹೋಗಿ, ಕತ್ತಲೆ ಇದ್ದ ಜಾಗದ ಖಾಲಿ ಲೇಔಟ್ ನಲ್ಲಿ ಬೈಕ್ ನಿಲ್ಲಿಸಿದ್ದಾನೆ.
ಬಳಿಕ ನಿಮ್ಮ ಡ್ರೆಸ್ ತೆಗೀರಿ, ನಾನು ಅದು ಮಾಡಬೇಕು. ಆಮೇಲೆ ನಾನೇ ಡ್ರಾಪ್ ಮಾಡುತ್ತೇನೆ ಎಂದಿದ್ದಾನಂತೆ. ಬಳಿಕ ತನ್ನ ಪ್ಯಾಂಟ್ ಬಿಚ್ಚಿ, ಮೈ ಮುಟ್ಟಲು ಮುಂದಾಗಿದ್ದಾನೆ. ಆಗ ಜೋರಾಗಿ ಕೂಗಿ ಅಲ್ಲಿಂದ ಓಡಿ ಹೋಗಿ ಇನ್ನೊಂದು ಬೈಕ್ ಸವಾರನನ್ನು ನಿಲ್ಲಿಸಿ ಅವರಿಂದ ಡ್ರಾಪ್ ತೆಗೆದುಕೊಂಡೆ ಎಂದು ಮಹಿಳೆ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾಳೆ.
ಇನ್ನು ಮಹಿಳೆಯ ಆರೋಪವನ್ನು ನಿರಾಕರಿಸಿದ ಬೈಕ್ ಸವಾರ, ಆಕೆಯೇ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾನು ಆ ಮಹಿಳೆಗೆ ಲಿಫ್ಟ್ ಕೊಟ್ಟಿದ್ದು ನಿಜ. ನಾನೊಬ್ಬ ವೈದ್ಯ, ನನಗೆ ಮಹಿಳೆ ಮೇಲೆ ಆ ತರಹದ ಯಾವುದೇ ಯೋಚನೆಗಳಿಲ್ಲ, ರಾತ್ರಿ ವೇಳೆ ಪಾಪಾ ಹೆಣ್ಣು ಮಗಳು ನಿಂತಿದ್ದಾಳೆ ಅಲ್ಲಿಯವರೆಗೆ ಬಿಡೋಣ ಅಂತ ಸಹಾಯ ಮಾಡಿದೆ ಅಷ್ಟೇ ಎಂದಿದ್ದಾರೆ.