ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರು ಪಾಲಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬಲಮುರಿ ಕ್ಷೇತ್ರದಲ್ಲಿ ನಡೆದಿದೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಶ್ರೇಯಸ್(19) ಎಂದು ಗುರ್ತಿಸಲಾಗಿದೆ.
ಈತ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ ಓದುತ್ತಿದ್ದ. ಮೂವರು ಸ್ನೇಹಿತರ ಜೊತೆಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಘಟನೆ ನಡೆದಿದೆ.
Navy Recruitment: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ.! ತಿಂಗಳಿಗೆ 90,000 ಸಂಬಳ
ಈಜಲು ಬಾರದ ಹಿನ್ನೆಲೆ ಸ್ನೇಹಿತರು ನದಿ ದಡದಲ್ಲಿಯೇ ಕುಳಿತಿದ್ದರು. ಈಜು ಬರುತ್ತಿದ್ದರಿಂದ ಶ್ರೇಯಸ್ ಏಕಾಂಗಿಯಾಗಿ ನದಿಗಿಳಿದಿದ್ದ. ಈ ವೇಳೆ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಕೆಆರ್ಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.