ಬೆಂಗಳೂರು: ಮನೆಯಿಂದ ಡ್ಯೂಟಿಗೆ ಹೋಗುವಂತೆ ರೆಡಿಯಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಂಧಿತ ಆರೋಪಿಯಾಗಿದ್ದು, ಮನೆಯಿಂದ ಡ್ಯೂಟಿಗೆ ಹೋಗುವಂತೆ ರೆಡಿಯಾಗಿ ಬರ್ತಿದ್ದ ಆರೋಪಿ,
ಮನೆ ಮುಂದೆ ಹಾಗೂ ಪಾರ್ಕ್ ಬಳಿ ಇರುವ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದನು. ಇನ್ನೂ ರಾಜಗೋಪಾಲನಗರ , ನೆಲಮಂಗಲ ಸೇರಿದಂತೆ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
Navy Recruitment: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ.! ತಿಂಗಳಿಗೆ 90,000 ಸಂಬಳ
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬರ್ತ್ ಡೇ ದಿನವೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 15 ಕ್ಕೂ ಹೆಚ್ಚು ಬೈಕ್ ಗಳ ವಶಕ್ಕೆ ಪಡೆದಿದ್ದಾರೆ.