ಬೆಳಗಾವಿ: ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
Mouth Wash Effects: ಬ್ರಷ್ ಮಾಡಿದ ನಂತರ ಮೌತ್ ವಾಶ್ ಬಳಸುತ್ತೀರಾ..? ಹಾಗಾದ್ರೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು!
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯದ ಕುರಿತು ಡಾ.ರವಿ ಪಾಟೀಲ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 24 ಗಂಟೆಯಲ್ಲಿ ಹೆಬ್ಬಾಳ್ಕರ್ ಆರೋಗ್ಯ ಚೆನ್ನಾಗಿ ಚೇತರಿಕೆ ಕಂಡಿದೆ. ಸಚಿವರ ಬೆನ್ನುಹುರಿ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.
ವೈದ್ಯರು ಹೇಳಿದ್ದೇನು?
ಹೆಬ್ಬಾಳ್ಕರ್ ಮತ್ತು ಸಹೋದರ ಚನ್ನರಾಜ್ ಇಬ್ಬರೂ ಔಟ್ ಆಫ್ ಡೇಂಜರ್ ಇದ್ದಾರೆ. ಅವರ ಗನ್ ಮ್ಯಾನ್, ಕಾರ್ ಚಾಲಕ ಸಹ ಆರೋಗ್ಯವಾಗಿದ್ದಾರೆ. ಸಚಿವರು ಒಂದು ವಾರ ವಿಶ್ರಾಂತಿ ಪಡೆಯಬೇಕು. ಚನ್ನರಾಜ್ ಅವರಿಗೂ ವಿಶ್ರಾಂತಿ ಪಡೆಯಲು ಸೂಚಿಸಿದ್ದೇವೆ.
ಮಂಗಳವಾರ ಎಂಆರ್ಐ, ಎಕ್ಸ್ರೇ ತೆಗೆಸಿ ತಪಾಸಣೆ ಮಾಡಿದ್ದೇವೆ. ಇಂದು ಅವರ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಸಚಿವರಿಗೆ ಹೈಪ್ರೋಟಿನ್ ಆಹಾರ ಸೇವಿಸಲು ಸಲಹೆ ಕೊಟ್ಟಿದ್ದೇವೆ. ಪನ್ನೀರ್, ಡ್ರೈ ಫ್ರೂಟ್ಸ್ ತೆಗೆದುಕೊಳ್ಳಲು ಹೇಳಿದ್ದೇವೆ ಎಂದರು.