ಬಾಗಲಕೋಟೆ:- ಹಿಂದಿನ ಸಿದ್ದರಾಮಯ್ಯನೇ ಬೇರೆ ಈಗಿನ ಸಿದ್ದರಾಮಯ್ಯನೇ ಬೇರೆ, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂದು ವಿ ಸೋಮಣ್ಣ ಹೇಳಿದ್ದಾರೆ.
ಪ್ರೇಯಸಿಯೊಂದಿಗೆ ಮನಸ್ತಾಪ: ಯುವತಿ ಖಾಸಗಿ ವಿಡಿಯೋ ಹರಿಬಿಟ್ಟು ಯುವಕ ಸೂಸೈಡ್!
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಣ್ಣ, ಸಿದ್ದರಾಮಯ್ಯ ಸರ್ಕಾರವನ್ನು ಗೇಲಿ ಮಾಡಿದರು. ಯಾವ ಸರ್ಕಾರದ ಬಗ್ಗೆ ನೀವು ಮಾತಾಡುತ್ತಿರುವಿರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಸೋಮಣ್ಣ ಈ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಯಾವುದು ಇಲ್ಲ, ಕೇವಲ ಅಸ್ಥಿಪಂಜರ ಮಾತ್ರ ಉಳಿದಿದೆ, ಅದು ಸಹ ಯಾವಾಗ ಸುಟ್ಟುಹೋಗುತ್ತೋ ಗೊತ್ತಿಲ್ಲ ಎಂದರು. ಯಾವ ಜನರನ್ನು ಗಮನದಲ್ಲಿಟ್ಟಿಕೊಂಡು ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ? ಅಸಲಿಗೆ ರಾಜ್ಯದಲ್ಲಿ ಸರ್ಕಾರವೇ ಅಧಿಕಾರದಲ್ಲಿಲ್ಲ ಎಂದು ಸಚಿವ ಹೇಳಿಕೆ ಕೊಟ್ಟಿದ್ದಾರೆ.