ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಹಾಗೇ ಪ್ರತಿ ಸಂಕ್ರಮಣದಂದು ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿಯಾಗುತ್ತೆ. ಆದ್ರೆ, ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿವಾಗಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ.
ಈ ವರ್ಷ ಸೇರಿ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ. ಒಂದು ವೇಳೆ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶಯಾಗಿದ್ದರೇ, ಗವಿಗಂಗಾಧರನಿಗೆ ನಮಿಸಿ ಪಥವನ್ನು ಸೂರ್ಯದೇವ ಬದಲಿಸುತ್ತಿದ್ದ. ಇದಾದ ಬಳಿಕ ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವಾಗ ಸೂರ್ಯ ಕಿರಣಗಳು ದೇವಾಲಯದಲ್ಲಿನ ಶಿವ ಲಿಂಗವನ್ನು ಸ್ಪರ್ಶಿಸುತ್ತಿದ್ದ. ಹೀಗಾಗಿಯೇ ಇಂದು ಗವಿಗಂಗಾಧರ ದೇವಸ್ಥಾನದ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿತ್ತು. ಇಂದು ಬೆಳ್ಳಗ್ಗೆ 5 ಗಂಟೆಗೆ ಪೂಜೆ ಆರಂಭವಾಗಿದ್ದು ಪುಷ್ಪಾಭಿಷೇಕ, ಮಹಮಂಗಳಾರತಿ, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಸೂರ್ಯ ರಶ್ಮಿ ಸ್ಪರ್ಶಿಸುವುದನ್ನು ಕಣ್ತುಂಬಿಕೊಳ್ಳಲು ಗವಿಗಂಗಾಧರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ ಭಕ್ತರಿಗಾಗಿ LED ಸ್ಕ್ರೀನ್ ಕೂಡ ಹಾಕಲಾಗಿತ್ತು. ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಭಕ್ತರು ಕಾಯುತ್ತಿದ್ದರು. ಆದರೆ ಇದೀಗ ನಿರಾಸೆ ಆಗಿದೆ.