ಬೆಂಗಳೂರು: ಕಾಂಗ್ರೆಸ್ʼನವರು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಡೆ ಕೊಲೆ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಘಟನೆ ಆದ ಕೂಡಲೇ ಸ್ಥಳಕ್ಕೆ ಬಂದಿದ್ದೆ. ರಕ್ತ ಹರಿಯುತ್ತಿತ್ತು, ಕೆಚ್ಚಲು ಕತ್ತರಿಸಿದ್ದನ್ನ ನಾನು ನೋಡಿದೆ. ಪೊಲೀಸರು ಬಂಧನ ಮಾಡಿರುವವನು ಯಾವಾಗಲೂ ಬ್ಲೇಡ್ ಇಟ್ಟುಕೊಳ್ಳುತ್ತಿದ್ದ ಅಂತ ಹೇಳುತ್ತಾರೆ.
Kisan credit card: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯಿಂದ ರೈತರಿಗೆ ಆಗುವ ಲಾಭಗಳೇನು ಗೊತ್ತಾ..?
ಮನುಷ್ಯತ್ವ ಇರುವವರು ಹೀಗೆ ನಡೆದುಕೊಳ್ಳಲ್ಲ, ಗೋವಿಗೆ ಪೂಜೆ ಮಾಡುವ ಹಬ್ಬ ಇವತ್ತು. ಕಾಂಗ್ರೆಸ್ ಮುಖಂಡರು ನಿನ್ನೆ ಹಸು ತೆಗೆದುಕೋ ಅಂತ ಗಲಾಟೆ ಮಾಡಿದ್ದಾರಂತೆ. ಕಾಂಗ್ರೆಸ್ ನವರು ಒಂದು ಕೈಯಲ್ಲಿ ಕೊಡುವುದು ಮತ್ತೊಂದು ಕಡೆ ಕೊಲೆ ಮಾಡುವುದು. ಗೋವಿನ ಶಾಪ ನಿಮಗೆ ತಟ್ಟುತ್ತದೆ ಎಂದು ಕಿಡಿಕಾರಿದರು.