ದೇಶಾದ್ಯಂತ ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬವನ್ನು ಅತ್ಯಂತ ಹರ್ಷದಿಂದ ಆಚರಣೆ ಮಾಡಲಾಗುತ್ತಿದೆ. ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅದರಂತೆ ಗುಜರಾತ್ನ ಅಹಮದಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಳಿಪಟ ಹಾರಿಸಿ ಮಕರ ಸಂಕ್ರಾಂತಿ ಆಚರಣೆ ಮಾಡಿದರು.
Kisan credit card: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯಿಂದ ರೈತರಿಗೆ ಆಗುವ ಲಾಭಗಳೇನು ಗೊತ್ತಾ..?
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಅಮಿತ್ ಶಾ ಅಹಮದಾಬಾದ್ನ ಶಾಂತಿನಿಕೇತನ ಸೊಸೈಟಿಯ ಕಟ್ಟಡವೊಂದರ ಮೇಲ್ಛಾವಣಿಯಿಂದ ಗಾಳಿಪಟ ಹಾರಿಸಿ ಖುಷಿಪಟ್ಟರು. ಪ್ರತಿ ವರ್ಷ ಜ.14 ರಂದು ದೇಶಾದ್ಯಂತ ಆಚರಿಸಲಾಗುವ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ.
ಅಮಿತ್ ಶಾ ಅವರು ಮೇಮ್ನಗರದ ಶಾಂತಿನಿಕೇತನ ಸೊಸೈಟಿಯಲ್ಲಿ ಸ್ಥಳೀಯರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಿದರು. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು ಎಂದು ಸಿಎಂ ಭೂಪೇಂದ್ರ ಪಟೇಲ್ ಅವರು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.