ಹುಬ್ಬಳ್ಳಿ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿಷಮುಕ್ತ ಸ್ನಾನ ಅಭಿಯಾನವನ್ನು ಇಲ್ಲಿಯ ವರದಶ್ರೀ ಫೌಂಡೇಷನ್ ರಾಜ್ಯಾದ್ಯಂತ ಆಯೋಜಿಸಿದೆ. ಜ. 14 ಮತ್ತು 15ರಂದೂ ಈ ಅಭಿಯಾನ ಮುಂದುವರಿಯಲಿದೆ. ಒಟ್ಟಾರೆ 40 ಕ್ವಿಂಟಲ್ ಕಡಲೆಹಿಟ್ಟು ವಿತರಿಸಲಾಗುತ್ತಿದೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರದಶ್ರೀ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡರ, ರಾಜ್ಯದ 23 ತೀರ್ಥಕ್ಷೇತ್ರಗಳಲ್ಲಿ 10 ಲಕ್ಷ ಜನರಿಗೆ ಕಡಲೆ ಇಟ್ಟು (ಚಿಕ್ಕದು) ಪ್ಯಾಕೆಟ್ ವಿತರಿಸಲಾಗುತ್ತಿದೆ ಎಂದರು.
ಡಿನ್ನರ್ ಮೀಟಿಂಗ್ ಯಾವುದಕ್ಕೂ ಅವಕಾಶ ಇಲ್ಲ: “ಕೈ” ನಾಯಕರಿಗೆ ಖಡಕ್ ಸೂಚನೆ ಕೊಟ್ಟ ಸುರ್ಜೇವಾಲ!
ಶಾಂಪು, ಸಾಬೂನು ಬಳಸುವುದರಿಂದ ಮಾಲಿನ್ಯ ಹೆಚ್ಚುತ್ತದೆ. ನೀರಿನಲ್ಲಿರುವ ಜೀವ ಸಂಕುಲಕ್ಕೆ ಕಂಟಕವಾಗುತ್ತದೆ. ಗಿಡ- ಮರಗಳಿಗೂ ಅಪಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಷಮುಕ್ತ ಸ್ನಾನ ಅಭಿಯಾನ ಶುರು ಮಾಡಲಾಗಿದೆ ಎಂದರು.
ಇದಕ್ಕೆ ಕನ್ಹೇರಿಮಠದ ಶ್ರೀ ಅದೃಶ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಬಹಳಷ್ಟು ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ. ಆಯಾ ತೀರ್ಥ ಕ್ಷೇತ್ರದಲ್ಲಿ ಸಂಘ-ಸಂಸ್ಥೆಗಳು ಸಹಕರಿಸುತ್ತಿವೆ. ಭಿತ್ತಿಪತ್ರ, ಜ್ಞಾನಪತ್ರ, ಐಡಿ ಕಾರ್ಡ್ ಜತೆಗೆ ಕಡಲೆ ಹಿಟ್ಟಿನ ಪ್ಯಾಕೆಟ್ ನೀಡಲಾಗುತ್ತಿದೆ ಎಂದರು.
ಕಳೆದ ವರ್ಷದಿಂದ ಅಭಿಯಾನ ಶುರುವಾಗಿದೆ. ಮುಂದಿನ ವರ್ಷ ವಿಷಮುಕ್ತ ಬಚ್ಚಲು ಅಭಿಯಾನ ಮಾಡುವ ಉದ್ದೇಶವಿದೆ. ಸಾಮಾನ್ಯರು ಕೊಟ್ಟ ಅಗಾಧ ಸಲಹೆಗಳೇ ನಮಗೆ ಮಾರ್ಗದರ್ಶನ ನೀಡುತ್ತಿವೆ. ಸಮಾನಕ್ಕೂ ಇದರಿಂದ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ವರದಶ್ರೀ ಫೌಂಡೇಷನ್ನಿಂದ ಈಗಾಗಲೇ ಆಕ್ಸಿಜನ್ ಟಾವರ್ ಹೆಸರಲ್ಲಿ ಸಸಿಗಳನ್ನು ಗ್ರಾಮಗಳಲ್ಲಿ ನಡೆಸಲಾಗುತ್ತಿದೆ. ಒಟ್ಟು 21 ಯೋಜನೆಗಳನ್ನು ಫೌಂಡೇಷನ್ ಹಾಕಿಕೊಂಡಿದ್ದು, ಸಮಾಜ ಸೇವೆಯಲ್ಲಿ ತೊಡಗಿದೆ ಎಂದರು. ಫೌಂಡೇಷನ್ ಕಾರ್ಯದರ್ಶಿ ಕೆ.ಎಸ್. ಶಿರಸಂಗಿ, ಸಾವಯವ ಕೃಷಿ ವಿಭಾಗದ ಮುಖ್ಯಸ್ಥ ನಾರಾಯಣ ಮಾಡಳ್ಳಿ, ಮುತ್ತಪ್ಪ ನಲವಡಿ, ತರುಣ್ ದೇವರಡ್ಡಿ ಇದ್ದರು .