ಹಾಸನ:- ಸಮಯ ಬರುತ್ತೆ, ನಾನು ಇವರನ್ನ ಬಿಡ್ತಿನಾ ಎಂದು ಅಧಿಕಾರಿಗಳಿಗೆ HD ರೇವಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ಹಿಂದೂಗಳಿಗೆ ಎರಡು ಮಕ್ಕಳು ಸಾಕು ಎಂದ ಸಿದ್ದರಾಮಯ್ಯ: ಸಿಎಂ ಹೇಳಿಕೆಗೆ ಅಶೋಕ್ ಕಿಡಿ!
ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಧಿಕಾರಿಗಳೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ? ಸಮಯ ಬರುತ್ತೆ, ನಾನು ಇವರನ್ನ ಬಿಡ್ತಿನಾ ಎಂದು ಡಿಸಿ, ಎಸ್ಪಿ, ಜಿ.ಪಂ. ಸಿಇಓ, ಎಸಿ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ, ಎಸ್ಪಿಗೆ ಬಡ್ತಿ ನೀಡಿದ್ದಾರೆ. ಇವರೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ನಾನು ಹೆದರಿ ಓಡಿ ಹೋಗುತ್ತೇನೆ, ದೇವೇಗೌಡರ ಕುಟುಂಬದ್ದು ಮುಗಿದೇ ಹೋಯಿತು ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.