ಬೆಂಗಳೂರು:- ಹಿಂದೂಗಳಿಗೆ ಎರಡು ಮಕ್ಕಳು ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ಕಿಡಿಕಾರಿದ್ದಾರೆ.
ಪರಿಸ್ಥಿತಿ ಅನಿವಾರ್ಯವಾದರೆ ತ್ಯಾಗ ಮಾಡಲೇಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ!
ಈ ಸಂಬಂಧ ಮಾತನಾಡಿದ ಅವರು, ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಸಿದ್ದರಾಮಯ್ಯ ಹೇಳಲಿ. ಬಳ್ಳಾರಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹಿಂದೂಗಳು ಎರಡೇ ಮಕ್ಕಳು ಮಾಡಿಕೊಳ್ಳಿ ಎಂಬ ಸಿಎಂ ಸಿದ್ದರಾಮಯ್ಯ ಸಲಹೆಗೆ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಇದನ್ನು ಹೋಗಿ ಸಾಬರಿಗೆ ಹೇಳುತ್ತಾರಾ? ಹಿಂದೂಗಳ ಸಂಖ್ಯೆ ಕಡಿಮೆ ಆಗಲಿ, ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿ ಎಂದು ಸಿದ್ದರಾಮಯ್ಯ ಕುತಂತ್ರ ಮಾಡಿದ್ದಾರೆ. ಸಿಎಂ ಓಲೈಕೆ ಮಾಡುವುದನ್ನು ಬಿಡಬೇಕು. ಇದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೊನ್ನೆ ಸ್ವಾಮೀಜಿಗಳು ಹಿಂದೂಗಳು ಜಾಸ್ತಿ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ್ದಕ್ಕೆ ಕೌಂಟರ್ ಆಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಆರೋಪ ಮಾಡಿದರು.