ನಟ ದರ್ಶನ್ ನೋವು ಹೊರಗಿನವರಿಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಸ್ನೇಹಿತನ ಪರ ನಟಿ ರಕ್ಷಿತಾ ಪ್ರೇಮ್ ಬ್ಯಾಟಿಂಗ್ ಮಾಡಿದ್ದಾರೆ.
ನೀವು ಹೆಚ್ಚು ವೆಸ್ಟ್ರನ್ ಟಾಯ್ಲೆಟ್ ಬಳಸುತ್ತಿದ್ರೆ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ!
ನಮ್ಮ ಅಪ್ಪಾಜಿ ಕಾಲದಿಂದಲೂ ದರ್ಶನ್ ಜೊತೆ ನನಗೆ ಒಡನಾಟವಿದೆ. ನಾವು ಕಷ್ಟ-ಸುಖ ಎಲ್ಲವನ್ನು ಹಂಚಿಕೊಳ್ಳುವ ಸ್ನೇಹಿತರು ಎಂದ ರಕ್ಷಿತಾ ಪ್ರೇಮ್, ನಾಳಿನ ಸಂಕ್ರಾಂತಿ ದರ್ಶನ್ ಜೀವನದಲ್ಲೂ ಒಳ್ಳೆಯ ದಿನಗಳನ್ನು ತರುತ್ತೆ ಎನ್ನುವ ನಂಬಿಕೆ ನನಗಿದೆ ಎಂದಿದ್ದಾರೆ.
ನಮ್ಮ ಅಪ್ಪನಿಗೆ ದರ್ಶನ್ ಮೇಲೆಯೇ ಅಪಾರ ನಂಬಿಕೆ ಇತ್ತು. ನಮ್ಮ ದೊಡಮ್ಮ ನಮ್ಮ ಜೊತೆ ಇದ್ರು. ಅವ್ರು ಡಿಪ್ರೆಶನ್ಗೆ ಹೋಗಿ ಮನೆಯಲ್ಲೇ ಬೆಂಕಿ ಹಚ್ಕೊಂಡಿದ್ರು. ಆ ಸಮಯದಲ್ಲಿ ನಮ್ಮ ಅಪ್ಪ ನನಗೆ ಕಾಲ್ ಮಾಡಲಿಲ್ಲ ದರ್ಶನ್ಗೆ ಕಾಲ್ ಮಾಡಿದ್ರು. ದರ್ಶನ್ ನಮ್ಮ ಮನೆಗೆ ಬಂದು ಅವನ ಕಾರಲ್ಲಿ ಅವ್ರನ್ನ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ದರ್ಶನ್ ಇವತ್ತಿಂದ ಅಲ್ಲ, ನನ್ನ ತಂದೆಯ ಕಷ್ಟದ ದಿನಗಳಲ್ಲೂ ನಮ್ಮ ಜೊತೆ ಇದ್ದಾನೆ ಎಂದು ರಕ್ಷಿತಾ ಹೇಳಿದ್ರು.
ದರ್ಶನ್ ನನ್ನ ಕುಟುಂಬದವರು. ನನಗೆ ಏನಾದ್ರು ತೊಂದರೆ ಆದ್ರೆ ಅವನು ನನ್ನ ಜೊತೆ ಇರ್ತಾನೆ. ಅವನಿಗೆ ಏನೇ ಆದ್ರೂ ನಾನು ಅವನ ಜೊತೆ ಇದ್ದೇ ಇರ್ತೀನಿ. ಅವನಿಗೆ ಇನ್ಮುಂದೆ ಏನೂ ಆಗಲ್ಲ ಆಗಲೂ ಬಾರದು. ಇದೇ ರೀತಿ ನಾನು ಅವನಿಗೆ ಹೊಸ ವರ್ಷಕ್ಕೆ ವಿಶ್ ಮಾಡಿದ್ದೇನೆ ಎಂದರು.