ಬೆಂಗಳೂರು: ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದ ಹಸುಗಳ ಕೆಚ್ಚಲು ಕೋಯ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ಮಾನವರು ತಲೆ ತಗ್ಗಿಸುವ ಕೆಲಸ. ಹಸುಗಳಿಗೆ ಕೆಚ್ಚಲು ಕುಯ್ಯೋ ಅಮಾನವೀಯ ಕೆಲಸ ಮಾನವರು ಮಾಡಲು ಸಾಧ್ಯವಿಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಚ್ಚಲು ಕೊಯ್ಯಬಹುದು. ಮೂಕ ಪ್ರಾಣಿಗಳ ಕೆಚ್ಚಲು ಯಾರು ಕೊಯ್ದರು ಎಂದು ಬಯಲಿಗೆ ತರಬೇಕು. ಆದರೆ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಸಿಎಂ ರಾಜಕೀಯ ಮಾಡಬೇಡಿ, ಶಾಸಕರು ನಾನು 3 ಹಸು ಕೊಡಿಸ್ತೀನಿ ಎಂದಿದ್ದಾರೆ. ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಈ ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಕೆಡುತ್ತಿದೆ. ತಮ್ಮ ಅಧಿಕಾರದ ಕಿತ್ತಾಟದಲ್ಲಿ ರಾಜ್ಯವನ್ನು ಈ ಸರ್ಕಾರ ಮರೆಯುತ್ತಿದೆ. ಇದು ಕಿವುಡು ಸರ್ಕಾರ, ಕಿವುಡು ಮಂತ್ರಿಗಳಿಗೆ ಯಾರು ಹೇಳಬೇಕು? ಪ್ರಿಯಾಂಕ್ ಖರ್ಗೆ ಬಿಜೆಪಿ ಮೇಲೆ ಆರೋಪ ಮಾಡ್ತಾರೆ. ಗುತ್ತಿಗೆದಾರ ಸಂಘ ಪತ್ರ ಬರೆದಿದೆ. ಯಾರಪ್ಪನ ಮನೆಯಿಂದ ತಂದು ಕೊಡುತ್ತಾರೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಅದರ ಹಣ ಕೇಳುತ್ತಿದ್ದಾರೆ. ಸುಮ್ಮನೆ ಆರೋಪ ಮಾಡಬೇಡಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.