ಬೆಂಗಳೂರು: ಗ್ಯಾರಂಟಿ ಮೂಲಕವೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೀತಿವೆ. ಅಧಿಕಾರ ಹಂಚಿಕೆ ಸೂತ್ರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತು ಹಸ್ತದ ಕೋಟೆಯೊಳಗೆ ಸದ್ದು ಮಾಡುತ್ತಲೇ ಇದೆ. ಇದೀಗ ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆಶಿ ಆವರು ಸಿಎಂ ಆಗ್ತಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಾಸಕರು ಚರ್ಚೆ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಚರ್ಚೆ ಆಗ್ತಿದೆ. ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆಶಿ ಆವರು ಸಿಎಂ ಆಗ್ತಾರೆ, ಸಿದ್ದರಾಮಯ್ಯ ಬಳಿಕ ಅವರೇ ಆಗಬೇಕಲ್ವಾ? ಸಿಎಂ ಅಭ್ಯರ್ಥಿ ಬೇರೆ ಯಾರಿದ್ದಾರೆ? ಆದ್ರೆ ಈ ಅವಧಿಯಲ್ಲೇ ಆಗ್ತಾರ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಪ್ರಶ್ನೆ ಮಾಡಿದರು.
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಒಕ್ಕಲಿಗರ ಸಂಘದಿಂದ ಡಿಕೆಶಿ ಸಿಎಂ ಮಾಡಲು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೊ ಹೇಳಿದ್ರು ಅಂದ ಮಾತ್ರಕ್ಕೆ ಹೇಳಿದವರನ್ನೆಲ್ಲಾ ಸಿಎಂ ಮಾಡೋದಕ್ಕೆ ಆಗಲ್ಲ. ಅವರು ಜಾತಿ ಅಭಿಮಾನದಿಂದ ಹೇಳಿದ್ದಾರೆ. ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಮಾಡ್ತಾರೆ ಎಂದರು.