ಚಾಮರಾಜನಗರ:- ಬಂಡೀಪುರದಲ್ಲಿ ಒಂಟಿಸಲಗ ರಸ್ತೆಗಿಳಿದ ಹಿನ್ನೆಲೆ ಗಜರಾಜನ ಕಾಟಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ.
ಮಹಿಳೆಯರು ಮುಟ್ಟಾದಾಗ ಪ್ರೈವೆಟ್ ಭಾಗದಲ್ಲಿ ಪದೇ ಪದೇ ತುರಿಕೆ!? ಇದಕ್ಕೇನಿರಬಹುದು ಕಾರಣ?
ಒಂಟಿ ಸಲಗವೊಂದು ರಸ್ತೆಗೆ ಇಳಿದ ಪರಿಣಾಮ ಸುಮಾರು 3-4 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಹಿನ್ನೆಲೆ ತಮಿಳುನಾಡಿನ ಊಟಿ ಮೂಲಕ ಕರ್ನಾಟಕಕ್ಕೆ ಬರುತ್ತಿರುವ ಪ್ರಯಾಣಿಕರು ಗಜರಾಜನ ಕಾಟಕ್ಕೆ ಹೈರಣಾಗಿದ್ದಾರೆ. ರಾತ್ರಿ 9 ಗಂಟೆಗೆ ಸಂಚಾರ ಬಂದ್ ಹಿನ್ನಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ.
ಇತ್ತೀಚೆಗೆ ತರಕಾರಿ ವಾಹನಗಳಿಗಾಗಿ ಗಜರಾಜ ಆಗಾಗ ರಸ್ತೆಗಿಳಿಯುತ್ತಿದ್ದ. ಅದನ್ನೇ ಅಭ್ಯಾಸ ಮಾಡಿಕೊಂಡು ಈಗ ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಆತಂಕ ಮೂಡಿಸಿದ್ದಾನೆ