ರಾಮನಗರ:- ಬ್ರೋಕರ್ ಗಳು ಮನೆಗೆ ಬಂದ್ರೆ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
Hubballi: ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಿವಲ್, ವಿಜೇತರಿಗೆ ಬಹುಮಾನ ವಿತರಣೆ!
ಈ ಸಂಬಂಧ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಬ್ರೋಕರ್ಗಳು ನಿಮ್ಮ ಮನೆಗೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದರು.
ಮತ್ತೆ ಮತ್ತೆ ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಿಮ್ಮ ಆಸ್ತಿಗೆ ಬಹಳ ಮೌಲ್ಯ ಬರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.
ನಾನು ಶಾಲೆಗೆ 110 ಎಕರೆ ಜಮೀನು ಬರೆದುಕೊಟ್ಟಿದ್ದೇನೆ. ಹೆಚ್ಡಿ ಕುಮಾರಸ್ವಾಮಿ ಅಥವಾ ಮಂಜುನಾಥ್ 1 ಸೈಟ್ನಾದರೂ ಕೊಟ್ಟಿದ್ದಾರಾ? ನನ್ನನ್ನು ಶಾಸಕ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ಬೇರೆಯವರಿಗೆ ಮತ ಹಾಕಿದ್ದವರೂ ಯೋಚನೆ ಮಾಡಬೇಕು. ಸ್ಕೂಟರ್ ತಗೊಂಡು ಮದ್ದೂರು, ಮಳವಳ್ಳಿಗೆ ಹೋಗಿ ನೋಡಿ ಚನ್ನಪಟ್ಟಣಕ್ಕೆ ಹೋದರೆ ಮೂಗು ಹಿಡಿದುಕೊಂಡು ಹೋಗಬೇಕಿತ್ತು.
ನನಗೆ ನಾಚಿಕೆ ಆಯ್ತು, ನಾನೇ 200-300 ಕೋಟಿ ರೂ ಹಣ ಕೊಟ್ಟೆ. ಬಹಳಷ್ಟು ಜನ ಡಿಕೆ ಬ್ರದರ್ಸ್ ಜೊತೆ ಹೋಗೋಣ ಅಂತ ಬಂದ್ರು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲಿಸಿ ಗೌರವ ಉಳಿಸಿದ್ದರು. 25,000 ಮತಗಳ ಅಂತರದಿಂದ ಗೆಲ್ಲಿಸಿ ನಮ್ಮ ಗೌರವ ಉಳಿಸಿದರು ಎಂದಿದ್ದಾರೆ.