ಚಾಮರಾಜನಗರ: ಹನೂರು ತಾಲೂಕಿನ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಚಿರತೆ ಧಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕಾಡೆಮ್ಮೆ ಭಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಪಾರ್ಟಿ ಹುಚ್ಚು ತಂದಿತು ಆಪತ್ತು: 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ದುರ್ಮರಣ!
ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಪಚ್ಚೆದೊಡ್ಡಿ ಅರಣ್ಯದಲ್ಲಿ, ಚಿರತೆಯೊಂದು ಕಾಡೆಮ್ಮೆಯ ಮೇಲೆ ಧಾಳಿ ನಡೆಸಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹೂಡಲು ಹೋಗಿ, ಕಾಡೆಮ್ಮೆ ಭಾವಿಗೆ ಬಿದ್ದು ಅಸುನೀಗಿದೆ. ಈ ಸಂಬಂಧ, ವಲಯ ಅರಣ್ಯ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಭಾವಿಯಲ್ಲಿ ಬಿದ್ದ ಕಾಡೆಮ್ಮೆಯನ್ನು ಮೇಲಕ್ಕೆ ಎತ್ತಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.