ಹೃದಯಾಘಾತವೆಂದರೆ ಎದೆನೋವು ಎಂದೇ ಹಲವರು ಭಾವಿಸುವರು. ಆದರೆ ಇನ್ನು ಕೆಲವು ಲಕ್ಷಣಗಳು ಇವೆ ಎನ್ನುವುದು ತಿಳಿದಿಲ್ಲ. ಇದರಲ್ಲಿ ವಾಕರಿಕೆ ಮತ್ತು ವಾಂತಿ ಕೂಡ ಸೇರಿದೆ.
ಕಳಪೆ ಬ್ಯಾಟಿಂಗ್: ಆಸ್ಟ್ರೇಲಿಯಾದಲ್ಲೇ ನಿವೃತ್ತಿ ಘೋಷಿಸಲು ನಿರ್ಧರಿಸಿದ್ರಾ ಹಿಟ್ ಮ್ಯಾನ್!?
ಹೃದಯಾಘಾತದ ಸಂದರ್ಭದಲ್ಲಿ ವಾಂತಿ ತಮ್ತು ವಾಕರಿಕೆ ಕಂಡು ಬರುವುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಇದನ್ನು ಹೊಟ್ಟೆ, ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸುವರು. ಆದರೆ ಇದು ಹೃದಯದ ಸಮಸ್ಯೆಯಾಗಿರುವುದು. ವಾಕರಿಕೆ ಬಳಿಕ ವಾಂತಿ ಬಂದರೆ ಆಗ ಇದು ಹೃದಯಾಘಾತದ ಲಕ್ಷಣವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಹೆಚ್ಚಿನವರು ಇದನ್ನು ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವರು. ಆದರೆ ನಿಜವಾ ಗಿಯೂ ಇದು ಹೃದಯದ ಸಮಸ್ಯೆ. ಕೆಳಗಿನ ಭಾಗದ ಮಯೊ ಕಾರ್ಡಿಯಲ್ ನಿಂದ ಇದು ಬಂದರೆ ಆಗ ಇದು ಹೃದಯದ ಕೆಳಭಾಗದಿಂದ ಬರುವ ಹೃದಯಾಘಾತದ ಲಕ್ಷಣವಾಗಿದೆ.
ಅತಿಯಾಗಿ ಬೆವರು: ಎದೆನೋವಿಲ್ಲದೆ ಅತಿಯಾಗಿ ಬೆವರುತ್ತಲಿ ದ್ದರೆ, ಆಗ ಇದು ಹೃದಯದ ಸಮಸ್ಯೆಯ ಲಕ್ಷಣವಾಗಿರಬಹುದು. ಕೆಲವರು ಇದನ್ನು ಕಡೆಗಣಿಸುವರು. ಆದರೆ ಇದು ಕೂಡ ಹೃದಯ ಸಮಸ್ಯೆಯ ಲಕ್ಷಣವಾಗಿದೆ.
ದವಡೆ ನೋವು: ದವಡೆಯಲ್ಲಿ ಕಾಣಿಸಿಕೊಂಡಿರುವ ನೋವನ್ನು ಸಾಮಾನ್ಯವಾಗಿ ದಂತ ಸಮಸ್ಯೆ ಎಂದು ತಪ್ಪಾಗಿ ಅರ್ಥ ಮಾಡಲಾ ಗುತ್ತದೆ. ಆದರೆ ಇದು ಕೂಡ ಅಂಜಿನಾ ಅಥವಾ ಹೃದಯಾಘಾತದ ಲಕ್ಷಣವಾಗಿದೆ. ದಂತ ಸಮಸ್ಯೆಯೆಂದು ವೈದ್ಯರಲ್ಲಿ ಭೇಟಿ ನೀಡಿದ ಬಳಿಕ ಅವರಿಗೆ ಇದು ಹೃದಯದ ಸಮಸ್ಯೆ ಎಂದು ತಿಳಿದು ಬರುವುದು.
ಬೆನ್ನು ನೋವು
ಬೆನ್ನು ಹುರಿಯಲ್ಲಿ ಅಹಿತಕರದೊಂದಿಗೆ ಬೆನ್ನು ನೋವು ಕಾಣಿಸಿಕೊಳ್ಳ ಬಹುದು. ಈ ಲಕ್ಷಣವು ಎದೆನೋವಿನ ಯಾವುದೇ ಲಕ್ಷಣವಿಲ್ಲದೆ ಕಾಣಿಸಿಕೊಳ್ಳಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಅಪಾಯಕಾರಿ ಆಗಬಹುದು.
ವಾಕರಿಕೆ ಮತ್ತು ವಾಂತಿ: ಜಠರಕರುಳಿನ ಈ ಸಮಸ್ಯೆಯು ಹೃದಯದ ಸಮಸ್ಯೆಯಾಗಿರುವುದು. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚು. ಇದು ಸಾಮಾನ್ಯ ವಾಕರಿಕೆ ಅಥವಾ ವಾಂತಿ ಎಂದು ಕಡೆಸಲಾಗುತ್ತದೆ.
ಉಸಿರಾಟದ ತೊಂದರೆ: ಉಸಿರಾಡಲು ಕಷ್ಟಪಡುವುದು ಅಥವಾ ಉಸಿರುಕಟ್ಟಿದಂತೆ ಆಗುವುದು ಕೂಡ ಹೃದಯಾಘಾತದ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ಇತರ ಕೆಲವು ಲಕ್ಷಣ ಗಳೊಂದಿಗೆ ಕಾಣಿಸುವುದು.
ಅಸಾಮಾನ್ಯ ಬಳಲಿಕೆ: ಹಠಾತ್ ಅಥವಾ ಅಸಾಮಾನ್ಯ ಬಳಲಿಕೆ ಅಥವಾ ನಿಶ್ಯಕ್ತಿಯು ಕೂಡ ಹೃದಯದ ಸಮಸ್ಯೆಯ ಲಕ್ಷಣವಾಗಿದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವುದು. ಇದನ್ನು ಒತ್ತಡ, ನಿದ್ರೆಯ ಕೊರತೆ ಎಂದು ಕಡೆಗಣಿಸಲಾಗುತ್ತದೆ.
ತಲೆನೋವು: ಹೃದಯಾಘಾತದ ಸಂದರ್ಭದಲ್ಲಿ ತಲೆನೋವು ಕಾಣಿಸಿಕೊಳ್ಳಬಹುದು. ಇದನ್ನು ಹೆಚ್ಚಿನ ಜನರು ಸಾಮಾನ್ಯ ತಲೆನೋವು ಅಥವಾ ತಲೆಸುತ್ತು ಎಂದು ಕಡೆಗಣಿಸುವುದು ಇದೆ.
ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ಆಗ ಅದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು. ಟ್ರೊಪೊನಿನ್ ಪರೀಕ್ಷೆ ಮೂಲಕ ಹೃದಯಾಘಾತವನ್ನು ಪತ್ತೆ ಮಾಡಬಹುದು.
ಈ ಪರೀಕ್ಷೆಯು ಹೃದಯದ ಸ್ನಾಯುಗಳಿಗೆ ಹಾನಿಯಾಗಿರುವುದನ್ನು ಪತ್ತೆ ಮಾಡುವುದು ಮತ್ತು ಹೃದಯಕ್ಕೆ ಯಾವುದೇ ಸಮಸ್ಯೆಯಾದ ವೇಳೆ ಟ್ರೊಪೊನಿನ್ ಪ್ರೋಟೀನ್ ರಕ್ತನಾಳಗಳಿಗೆ ಬಿಡುಗಡೆಯಾಗುವುದು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಪಡೆದರೆ ಒಳ್ಳೆಯದು.