ಚಿಕ್ಕಮಗಳೂರು:- ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರಿಗೆ ಜೀವ ಬೆದರಿಕೆ ಹಾಕಿ ಅನಾಧೇಯ ಪತ್ರವೊಂದು ಬಂದಿದೆ.
ನಾಳೆಯಿಂದ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ; ಪ್ರಯಾಣಿಕರು ಓದಲೇಬೇಕಾದ ಸುದ್ದಿ!
ಸಿಟಿ ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಈ ಪತ್ರ ಬಂದಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ MLC ಸಿ.ಟಿ ರವಿ ಅವರು ಬಳಸಿರುವ ಪದ ಬಳಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಸಿ.ಟಿ ರವಿ ಅವರ ಚಿಕ್ಕಮಗಳೂರು ನಗರದ ಬಸವನಹಳ್ಳಿ ನಿವಾಸಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ಹೆಬ್ಬಾಳ್ಕರ್ ಗೆ 15 ದಿನದೊಳಗೆ ಕಾಲುಹಿಡಿದು ಕ್ಷಮೆ ಕೇಳ್ಬೇಕು. ಇಲ್ಲ ಮಗ ಸೂರ್ಯ ಸೇರಿದಂತೆ ರವಿಯನ್ನ ಹತ್ಯೆ ಮಾಡುವುದಾಗಿ ಪತ್ರ ಬಂದಿದ್ದು, ಈ ಬಗ್ಗೆ ಸಿ.ಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.
ಜನವರಿ 9ರಂದು ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಬೆದರಿಕೆ ಪತ್ರ ಬಂದಿದ್ದು, ಅದು ಸಿಟಿ ರವಿ ಅವರ ತವರು ಕ್ಷೇತ್ರ ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಬಂದಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.