ಅಘೋರಿಗಳ ವಿಚಾರದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅವರನ್ನು ಕಂಡರೆ ಅನಾವಶ್ಯಕ ಭಯಗಳು ಕೂಡ ಇವೆ. ಆದ್ರೆ ಅಘೋರಿಗಳು ನಮ್ಮ ಕಲ್ಪನೆ ಹಾಗೂ ಭಯದ ಆಚೆ ಒಂದು ವಿಚಿತ್ರ ವಿಸ್ಮಯವಾದ ಬದುಕನ್ನು ಬದುಕುತ್ತಾರೆ.
ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ: ಸಿ.ಎಂ.ಬಣ್ಣನೆ
ಅಘೋರಿ ಸಾಧುಗಳನ್ನು ತಾಂತ್ರಿಕರು, ತಂತ್ರವಿದ್ಯೆಯನ್ನು ಕರಗತ ಮಾಡಿಕೊಂಡವರು, ವಶೀಕರಣ ಅವರಿಗೆ ಅತ್ಯಂತ ಸುಲಭವಾದ ಕೆಲಸ ಹೀಗೆ ಹಲವು ಕಲ್ಪನೆಗಳು ಇವೆ. ಆದ್ರೆ ಅಘೋರಿಗಳು ಪಕ್ಕಾ ಪರಶಿವನ ಮಹಾಭಕ್ತರು. ಕಪಾಲಿಕ ಸಂಪ್ರದಾಯವನ್ನು ತಮ್ಮದಾಗಿಸಿಕೊಂಡಿರುವ ಇವರು. ಸಾಮಾನ್ಯವಾಗಿ ಕಪಾಲವೊಂದನ್ನು ಧರಿಸಿಕೊಂಡು ಅಲೆದಾಡುವುದು ನಮಗೆ ಕಾಣಸಿಗುತ್ತದೆ. ಅಘೋರಿ ಎಂಬ ಪದ ಸಂಸ್ಕೃತದ ಅಘೋರ್ ಪದದಿಂದ ಬಂದಂತಹುದು
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಕೆಲವೇ ದಿನಗಳಲ್ಲಿ ಮಹಾಕುಂಭ ಮೇಳ ಆರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಮಹಾಕುಂಭ ಮೇಳಕ್ಕೆ ಬಹಳ ಮಹತ್ವವಿದೆ. ನಂಬಿಕೆಗಳ ಪ್ರಕಾರ, ಮಹಾಕುಂಭದಲ್ಲಿ ಯಾರು ಪವಿತ್ರ ಸ್ನಾನ ಮಾಡುತ್ತಾರೊ, ಅವರ ಪಾಪಗಳೆಲ್ಲವೂ ಅಳಿಸಿಹೋಗುತ್ತವೆ ಎಂದು ನಂಬಲಾಗಿದೆ… ಈ ಬಾರಿ ಮಹಾಕುಂಭಕ್ಕೆ ಭಾರತ ಹಾಗೂ ವಿದೇಶಗಳಿಂದ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದರೊಂದಿಗೆ ಅನೇಕ ಸಂತರು, ಋಷಿಮುನಿಗಳೂ ಆಗಮಿಸಲಿದ್ದಾರೆ
ಈ ಸಂತರು ಮತ್ತು ಋಷಿಗಳಲ್ಲಿ, ಅಘೋರಿಗಳ ಒಂದು ವರ್ಗವಿದೆ, ಅವರ ಉಡುಗೆ ಮಾತ್ರ ಅವರನ್ನು ಉಳಿದವರಿಂದ ಪ್ರತ್ಯೇಕಿಸುತ್ತದೆ. ಅಘೋರಿಗಳ ಉಡುಪು ಮಾತ್ರವಲ್ಲ, ಅವರ ಜೀವನ ಮತ್ತು ಜೀವನ ವಿಧಾನವೂ ಪ್ರಪಂಚದ ಇತರ ಸಾಧುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕೆಲವು ಅಘೋರಿ ಸನ್ಯಾಸಿಗಳು ಮೃತ ದೇಹಗಳೊಂದಿಗೆ ಲೈಂಗಿಕ ಸಂಬಂಧವನ್ನು ಸಹ ಹೊಂದಿರುತ್ತಾರೆ.
ಅಘೋರಿ ಸನ್ಯಾಸಿಗಳು ಶಿವನ ಆರಾಧಕರು. ಅವರು ಹಿಂದೂ ಧರ್ಮದ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುವುದಿಲ್ಲ. ತಂತ್ರ ಸಾಧನಾದಲ್ಲಿ ಮಗ್ನನಾಗಿರುತ್ತಾರೆ. ಅಘೋರ್ ಶಿವನ ಐದು ರೂಪಗಳಲ್ಲಿ ಒಂದಾಗಿದೆ. ಭಗವಾನ್ ಶಿವನನ್ನು ಒಲಿಸಿಕೊಳ್ಳಲು, ಅಘೋರಿಗಳು ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಅಷ್ಟೇ ಅಲ್ಲ, ಅಘೋರಿ ಸನ್ಯಾಸಿಗಳು ಮೃತ ದೇಹಗಳೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿರುತ್ತಾರೆ. ಇದು ಅವರ ಸಾಧನಾ ಭಾಗವೂ ಆಗಿದೆ
ಅಘೋರಿಗಳು ಈ ಪದ್ದತಿಯ ಹಿಂದಿರುವ ಕಾರಣವನ್ನು ಕೆಳಿದಾಗ.. ಇದು ಶಿವ ಮತ್ತು ಶಕ್ತಿಯನ್ನು ಪೂಜಿಸುವ ಸಾಧನವಾಗಿದೆ, ಇದು ಸಾಧನಾ ವಿಧಾನ. ಮೃತದೇಹದೊಂದಿಗೆ ಶಾರೀರಿಕ ಸಂಬಂಧ ಹೊಂದಿದ್ದರೂ ಮನಸ್ಸು ಶಿವಭಕ್ತಿಯಲ್ಲಿ ಮುಳುಗಿದರೆ ಅದಕ್ಕಿಂತ ದೊಡ್ಡ ತಪಸ್ಸು ಬೇರೊಂದಿಲ್ಲ ಎನ್ನುತ್ತಾರೆ ಸಾಧುಗಳು.
ಅಲ್ಲದೆ, ಈ ವಿಧಾನ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರಿಂದ ತಂತ್ರ ವಿದ್ಯೆಯಲ್ಲಿ ಹೆಚ್ಚು ಪಾಂಡಿತ್ಯವನ್ನು ಗಳಿಸುತ್ತಾರಂತೆ. ಋಷಿಗಳು ಬ್ರಹ್ಮಚರ್ಯವನ್ನು ಆಚರಿಸುತ್ತಾರೆ. ಆದರೆ ಅಘೋರಿ ಸಾಧುಗಳು ಇದಕ್ಕೆ ವಿರುದ್ಧವಾಗಿ ಉಳಿದಿದ್ದಾರೆ. ಮದ್ಯಪಾನ ಮಾಡುತ್ತಾರೆ, ಮಾನವ ಮಾಂಸವನ್ನು ಸಹ ತಿನ್ನುತ್ತಾರೆ ಎನ್ನಲಾಗಿದೆ…