ಹಾಸನ:- ಹಾಸನದ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನುವ ಕಾರಣಕ್ಕೆ ತಮ್ಮನನ್ನೇ ಆತನ ಅಣ್ಣ ಹಾಗೂ ಪತ್ನಿ ಸೇರಿ ಕೊಲೆಗೈದ ಘಟನೆ ಜರುಗಿದೆ.
DK Shivakumar: ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್: DCM ಡಿಕೆಶಿ ವ್ಯಂಗ್ಯ!
ಆನಂದ್ ಕೊಲೆಯಾದ ವ್ಯಕ್ತಿ. ಆತನ ದೊಡ್ಡಪ್ಪನ ಪುತ್ರ ಸೋಮಶೇಖರ ಹಾಗೂ ಆನಂದನ ಪತ್ನಿ ಕೊಲೆಗೈದ ಆರೋಪಿಗಳಾಗಿದ್ದಾರೆ. ಆರೋಪಿಗಳು ಆನಂದನನ್ನು ಕೊಲೆ ಮಾಡಿ ತಮಗೇನು ಗೊತ್ತಿಲ್ಲದಂತೆ ನಾಟವಾಡಿದ್ದರು. ಇಬ್ಬರು ಸೇರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ, ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಪತ್ನಿ ಮರಣದ ಬಳಿಕ ಸೋಮಶೇಖರ ತಮ್ಮನ ಮನೆಗೆ ಬಂದು ತಿಂಡಿ, ಊಟ ಮಾಡುತ್ತಿದ್ದ. ಈ ವೇಳೆ ನಾದಿನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಆನಂದನಿಗೆ ತಿಳಿದು, ಆಪ್ತರ ಜೊತೆ ದುಃಖ ತೋಡಿಕೊಂಡಿದ್ದ. ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಪತ್ನಿಗೆ ತಿಳುವಳಿಕೆ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದ. ಆದರೆ ಅಕ್ರಮ ಸಂಬಂಧಕ್ಕೆ ಆನಂದ ಅಡ್ಡಿಯಾಗುತ್ತಿದ್ದ ಆತನನ್ನು ಮುಗಿಸಲು ಸೋಮಶೇಖರ್ ಹಾಗೂ ಹಾಗೂ ಕೊಲೆಯಾದವನ ಪತ್ನಿ ಸಂಚು ಮಾಡಿದ್ದರು.
ಕಳೆದ ವರ್ಷ ಡಿ.26 ರಂದು ಆನಂದ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆಂದು ಹಂಗರಹಳ್ಳಿ ಗ್ರಾಮದ ಪೆಟ್ರೋಕ್ ಬಂಕ್ಗೆ ಹೋಗಿದ್ದವನು ವಾಪಾಸ್ ಮನೆಗೆ ಬಂದಿರಲಿಲ್ಲ. ಆನಂದನನ್ನು ಹುಡುಕಾಡಿದ ತಾಯಿ ಹಾಗೂ ಪತ್ನಿ, ಗೊರೂರು ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು.
ಡಿ.28 ರಂದು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದನ ಶವ ಪತ್ತೆಯಾಗಿತ್ತು. ಪತ್ನಿ ಅಕ್ರಮ ಸಂಬಂಧದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಆನಂದನ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾವಿಸಿದ್ದರು. ಆದರೆ ಆನಂದ ಮೃತದೇಹ ನೋಡಿದ ನಂತರ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.