ಬೆಂಗಳೂರು: ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿರುವ ಕೇಸ್ನಲ್ಲಿ ಸಿಲುಕಿಕೊಂಡಿರುವ ಐಶ್ವರ್ಯಗೌಡ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಬಗೆದಷ್ಟು ಒಂದೊಂದೇ ವಂಚನೆಗಳು ಬಯಲಾಗ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಸಾಕಷ್ಟು ಜನರಿಗೆ ವಂಚಿಸಿರುವ ಆರೋಪಿತೆ ಐಶ್ವರ್ಯ ಗೌಡಳ ಗಂಡ ಹೆಸರಿನಲ್ಲಿ ಇರುವ ಬೆನ್ಜ್ ಕಾರು ವಿನಯ್ ಕುಲಕರ್ಣಿಗೆ ಕೊಟ್ಟಿದ್ದೇನೆ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ರು.
ಕೊಟ್ಟ ಸಾಲ ವಾಪಸ್ ಪಡೆಯಲು ಇಲ್ಲಿದೆ ನೋಡಿ ಪರಿಹಾರ..! ಈ ರೀತಿ ಮಾಡಿದ್ರೆ ಸಾಕಂತೆ!
ಹೀಗಾಗಿ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ವ್ಯವಹಾರಿಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿಯಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಐಶ್ವರ್ಯಗೌಡ ಬಳಿ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿತ್ತು.
ಇದೀಗ ಮತ್ತೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಕೆಎ03 ಎನ್ಎನ್ 8181 ಸಂಖ್ಯೆಯ 60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರನ್ನು ಸೀಜ್ ಮಾಡಲಾಗಿದೆ. ವಂಚನೆ ಮಾಡಿದ್ದ ಹಣದಿಂದ ಕಾರು ಖರೀದಿಸಿದ್ದ ಐಶ್ವರ್ಯ ಗೌಡ, ಅದನ್ನು ಗಿಫ್ಟ್ ರೂಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಿದ್ದಳು ಎನ್ನಲಾಗಿದೆ.