ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯನ್ನ ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆದ್ದಿದೆ. ಈ ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು, ಆಸೀಸ್ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಜೊತೆಗಿನ ಅವರ ಜಗಳ ಚರ್ಚೆಯ ವಿಷಯವಾಯಿತು.
ಇನ್ನೂ ಇದರ ನಡುವೆ ಉತ್ತರದ ಪ್ರದೇಶದ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೇಟಿ ನೀಡಿದ್ದಾರೆ. ಈ ಭೇಟಿಯ ವೇಳೆ ಆಶೀರ್ವಾದ ಪಡೆದ ಕೊಹ್ಲಿಗೆ ಗುರೂಜಿ ಕೆಲ ವಿಶೇಷ ಸಲಹೆಗಳನ್ನು ನೀಡಿದ್ದಾರೆ.
ವಿರುಷ್ಕಾ ಜೋಡಿಯ ಭೇಟಿಗೆ ಸಂತೋಷ ವ್ಯಕ್ತಪಡಿಸಿದ ಪ್ರೇಮಾನಂದ ಜಿ ಮಹಾರಾಜ್, ಯಶಸ್ಸಿನ ಉತ್ತುಂಗಕ್ಕೇರಿದರೂ ನೀವಿಬ್ಬರೂ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವುದು ದೊಡ್ಡ ವಿಷಯ ಎಂದರು. ಅಲ್ಲದೆ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಸಂತೈಸುವ ಮಾತುಗಳನ್ನಾಡಿದರು.
Ghee Tea: ತುಪ್ಪದ ಟೀ ಕುಡಿದಿದ್ದೀರಾ..? ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!
ಕ್ರಿಕೆಟ್ ಕೂಡ ಆಧ್ಯಾತ್ಮಿಕ ಅಭ್ಯಾಸ ಎಂದು ಬಣ್ಣಿಸಿದ ಪ್ರೇಮಾನಂದ ಜಿ ಮಹಾರಾಜ್, ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು ಎಂದರು. ಅಲ್ಲದೆ ಅಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು. ಈ ಮೂಲಕ ನೀವೇನು ಸಾಧಿಸಬೇಕೆಂದು ಬಯಸುತ್ತಿರೋ ಅದನ್ನು ಮುಟ್ಟಬಹುದು ಎಂದು ಆಶೀರ್ವಾದ ಮಾಡಿದರು.
ಅಭ್ಯಾಸವನ್ನು ಬಲಪಡಿಸುವುದು ನಿಮ್ಮ ಕರ್ತವ್ಯ. ಅದು ಕ್ರೀಡೆಯಾಗಿದ್ದರೂ, ನಿಮ್ಮ ಆಟದಿಂದ ಇಡೀ ಭಾರತ ಸಂತೋಷಪಡುತ್ತದೆ. ಹೀಗಾಗಿ ನಿಮ್ಮ ಅಭ್ಯಾಸದಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದರ ಜತೆ ದೇವರ ಸ್ಮರಣೆ ಕೂಡ ಇರಲಿ. ಇದುವೇ ನಿಮ್ಮ ಸಾಧನ ಎಂದು ವಿರಾಟ್ ಕೊಹ್ಲಿಗೆ ಪ್ರೇಮಾನಂದ ಜಿ ಮಹಾರಾಜ್ ತಿಳಿಸಿದರು. ಈ ಮೂಲಕ ಕಳಪೆ ಫಾರ್ಮ್ನಿಂದ ಮರಳಲು ಕಠಿಣ ಅಭ್ಯಾಸವೇ ಮೂಲಮಂತ್ರ ಎಂಬುದನ್ನು ಒತ್ತಿ ಹೇಳಿದರು.