ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ.
ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 10 ಪೈಸೆಯಷ್ಟು ಹೆಚ್ಚಾಗಿದೆ ಮತ್ತು ಲೀಟರ್ಗೆ 94.87 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಕೂಡ 12 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಗೆ 88.01 ರೂ.ಗೆ ತಲುಪಿದೆ. ಗಾಜಿಯಾಬಾದ್ನಲ್ಲೂ ಪೆಟ್ರೋಲ್ ಬೆಲೆ 6 ಪೈಸೆ ಹೆಚ್ಚಾಗಿದೆ ಮತ್ತು ಲೀಟರ್ಗೆ 94.64 ರೂ.ಗೆ ಮಾರಾಟವಾಗುತ್ತಿದೆ ಮತ್ತು ಡೀಸೆಲ್ 7 ಪೈಸೆ ಏರಿಕೆಯಾಗಿ ಲೀಟರ್ಗೆ 87.74 ರೂ.ಗೆ ಮಾರಾಟವಾಗುತ್ತಿದೆ.
Ghee Tea: ತುಪ್ಪದ ಟೀ ಕುಡಿದಿದ್ದೀರಾ..? ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!
ಬಿಹಾರದ ರಾಜಧಾನಿ ಪಾಟ್ನಾದಲ್ಲಿ, ಪೆಟ್ರೋಲ್ ಲೀಟರ್ಗೆ 39 ಪೈಸೆ ಏರಿಕೆಯಾಗಿದ್ದು, 105.34 ರೂ.ಗೆ ತಲುಪಿದೆ ಮತ್ತು ಡೀಸೆಲ್ ಬೆಲೆ 37 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ 92.19 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ.
-ದೆಹಲಿಯಲ್ಲಿ ಪೆಟ್ರೋಲ್ ರೂ 96.65 ಮತ್ತು ಡೀಸೆಲ್ ಲೀಟರ್ಗೆ ರೂ 89.82 – ಮುಂಬೈನಲ್ಲಿ ಪೆಟ್ರೋಲ್ ರೂ 106.31 ಮತ್ತು ಡೀಸೆಲ್ ರೂ 94.27 ರೂ. – ಚೆನ್ನೈನಲ್ಲಿ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24 ರೂ. ಕೋಲ್ಕತ್ತಾದಲ್ಲಿ ರೂ. 94.24 ರೂ. ಮತ್ತು ಡೀಸೆಲ್ ಲೀಟರ್ಗೆ 92.76 ರೂ ಇದೆ. – ನೋಯ್ಡಾದಲ್ಲಿ ಪೆಟ್ರೋಲ್ ಲೀಟರ್ಗೆ 94.87 ಮತ್ತು ಡೀಸೆಲ್ 88.01 ರೂ. – ಗಾಜಿಯಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.64 ರೂ ಮತ್ತು ಡೀಸೆಲ್ 87.74 ರೂ ಆಗಿದೆ.
ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 105.34 ರೂ ಮತ್ತು ಡೀಸೆಲ್ 92.19 ರೂ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ.