ಖಾನಾಪುರ ಭಾಗದಲ್ಲಿ ಜನರ ನಿದ್ದೆಗೆಡಸಿದ್ದ ಒಂಟಿ ಸಲಗವನ್ನು ಸಕ್ರೆಬೈಲು ಮಾವುತರು ಮತ್ತು ವೈದ್ಯರ ತಂಡ ಡಾರ್ಟ್ ಮಾಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೆರೆಸಿಕ್ಕ ಕಾಡಾನೆಯನ್ನು ಸಕ್ರೆಬೈಲು ಖೆಡ್ಡಾಗೆ ಸ್ಥಳಾಂತರಿಸಲಾಗಿದ್ದು, ಇಂದು ಲಾರಿಯಿಂದ ಖೆಡ್ಡಾಗೆ ಸೇರಿಸುವಲ್ಲಿ ಮಾವುತ ಕಾವಾಡಿಗಳು ಯಶಸ್ವಿಯಾದರು.
Ghee Tea: ತುಪ್ಪದ ಟೀ ಕುಡಿದಿದ್ದೀರಾ..? ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!
ಬೆಳಗಾಂ ಜಿಲ್ಲೆಯ ಚಾಪಗಾಂವ ಬಳಿ ಒಂಟಿ ಸಲಗ ರೈತರ ಜಮೀನಿಗೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಎಸಿಎಫ್ ಸುನಿತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಇಂದು ಆನೆಯನ್ನು ಖೆಡ್ಡಾಗೆ ಸೇರಿಸಿ, ಕೆಲವೇ ದಿನಗಳಿಂದ ಪಳಗಿಸುವ ಪ್ರಕ್ರೀಯೆಗೆ ಚಾಲನೆ ನೀಡಲಾಗುವುದು. ನಂತರ ಸೂಕ್ತ ತರಬೇತಿ ನೀಡಿ, ಅರಣ್ಯ ಇಲಾಖೆಯ ಕಾರ್ಯಗಳಿಗೆ ಸಾಕಾನೆಯನ್ನು ಬಳಸಿಕೊಳ್ಳಲಾಗುತ್ತದೆ.