ನೆಲಮಂಗಲ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ.
ಆರ್.ಆರ್ ನಗರ ವ್ಯಾಪ್ತಿಯಲ್ಲಿ ರಸ್ತೆಗಳ ಬದಿ ಭಗ್ನಾವಶೇಷ ಹಾಕುವವರ ಮೇಲೆ ದಂಡ ವಿಧಿಸಿ: ತುಷಾರ್ ಗಿರಿ ನಾಥ್!
ತೆಂಗಿನಕಾಯಿ ಕದ್ದ ಎಂಬ ಅನುಮಾನದ ಮೇಲೆ ತೆಂಗಿನ ಮೊಟ್ಟೆಯಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಸಿದ್ದರಾಜು 45 ಕೊಲೆಯಾದ ವ್ಯಕ್ತಿ. ಮಂಜುನಾಥ್ ಎಂಬುವವರ ತೋಟದಲ್ಲಿ ತೆಂಗಿನಕಾಯಿ ಕದ್ದ ಆರೋಪ ಕೇಳಿ ಬಂದಿದೆ.
ಮಂಜುನಾಥ್ ಹಾಗೂ ರವಿ ರಿಂದ ಸಿದ್ದರಾಜು ಕೊಲೆ ಆರೋಪ ಕೇಳಿ ಬಂದಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.