ತಮ್ಮ ಸಿಂಪ್ಲಿಸಿಟಿಯಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದ ಹನುಮಂತ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿದ್ದಾರೆ. ತನ್ನ ಸಂಪೂರ್ಣ ಗಮನವನ್ನು ಆಟದ ಮೇಲೆಯೇ ಇಟ್ಟಿರುವ ಹನುಮಂತ ಇದೀಗ ಸೈಲೆಂಟ್ ಆಗಿಯೇ ಫಿನಾಲೆಗೆ ಎಂಟ್ರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ.
ಫಿನಾಲೆ ಟಿಕೆಟ್ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಭವ್ಯಾ ಗೌಡ ಅವರು 3 ನಿಮಿಷ 22 ಸೆಕೆಂಡ್ ತೆಗೆದುಕೊಂಡರು. ರಜತ್ ಅವರು 3 ನಿಮಿಷ 49 ಸೆಕೆಂಡ್ ತೆಗೆದುಕೊಂಡರು. ತ್ರಿವಿಕ್ರಮ್ ಅವರು 2 ನಿಮಿಷ 30 ಸೆಕೆಂಡ್ ಪಡೆದುಕೊಂಡರು.
ಎಲ್ಲರಿಗಿಂತಲೂ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದು ಹನುಮಂತ. ಅವರು ಕೇವಲ 2 ನಿಮಿಷ 27 ಸೆಕೆಂಡ್ ತೆಗೆದುಕೊಂಡು ಟಾಸ್ಕ ಪೂರ್ಣಗೊಳಿಸಿ ಟಿಕೆಟ್ ಟು ಫಿನಾಲೆಗೆ ಆಯ್ಕೆಯಾದರು.
‘ಛೂ ಮಂತರ್’ ಸಿನಿಮಾದ ನಾಯಕ ನಟ ಶರಣ್ ಹಾಗೂ ನಾಯಕಿ ಅದಿತಿ ಪ್ರಭುದೇವ ಅವರು ಬಿಗ್ ಬಾಸ್ ಮನೆಗೆ ಬಂದು ಹನುಮಂತ ಅವರಿಗೆ ಫಿನಾಲೆಯ ಟಿಕೆಟ್ ನೀಡಿದರು. ಈ ವೇಳೆ ಕೇವಲ 3 ಸೆಕೆಂಡ್ ಅಂತರದಲ್ಲಿ ಸೋತಿದ್ದಕ್ಕೆ ತ್ರಿವಿಕ್ರಮ್ ಬೇಸರ ಮಾಡಿಕೊಂಡರು. ಜೊತೆಗೆ ಭವ್ಯಾ ಗೌಡ ಕೂಡ ಬೇಸರ ಮಾಡಿಕೊಂಡರು.
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಅಂತಮವಾಗಿ ಫಿನಾಲೆ ಘಟ್ಟಕ್ಕೆ ಬಂದಿದ್ದಾರೆ. ಅಲ್ಲದೇ ಈ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಕೂಡ ಅವರು ಆಯ್ಕೆ ಆಗಿದ್ದಾರೆ. ಆದ್ದರಿಂದ ಅವರನ್ನು ಅಲ್ಟಿಮೇಟ್ ಕ್ಯಾಪ್ಟನ್ ಎಂದು ಘೋಷಿಸಲಾಗಿದೆ.