ನಟ ಸೋನು ಸೂದ್ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹಿರೋ ಎಂದು ಸಾಭೀತು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಲವರಿಗೆ ನೆರವಾಗಿದ್ದ ಸೋನು ಸೂದ್ ತೆಲುಗು, ಕನ್ನಡ, ತಮಿಳು ಹೀಗೆ ಪ್ರತಿಯೊಂದು ಭಾಷೆಯ ಸಿನಿಮಾದಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ಈ ಮಧ್ಯೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಭಾಗಿಯಾದ ಸೋನು ಸೂದ್, ಬಾಲಿವುಡ್ ನಟರ ನಿಜ ಬಣ್ಣ ಬಯಲು ಮಾಡಿದ್ದಾರೆ.
ಬಾಲಿವುಡ್ ನಟರು ಹೊರಗೆ ಹೋದಾಗ ಪಾಪರಾಟ್ಜಿಗಳು, ಅಭಿಮಾನಿಗಳು ಅವರನ್ನು ಸುತ್ತುವರೆಯುವುದು ನೋಡಿಯೇ ಇರುತ್ತೀರಿ. ಆದರೆ ಇದು ನಿಜವಲ್ಲ ಎಂದಿದ್ದಾರೆ ಸೋನು ಸೂದ್. ಪಾಪರಾಜಿಗಳಿಗೆ ನಟ, ನಟಿಯರು ಮೊದಲೇ ಮಾಹಿತಿ ನೀಡಿರುತ್ತಾರಂತೆ. ಇಂಥಹಾ ಕಡೆ ಹೋಗುತ್ತಿದ್ದೀವಿ ನೀವು ಬನ್ನಿ ಎಂದು. ಜೊತೆಗೆ ನಟರು ಎಲ್ಲಾದರೂ ಹೋದಾಗ ಅವರ ಬಾಡಿಗಾರ್ಡ್ಗಳು ಬೇಕೆಂದೇ ಜೋರಾಗಿ ಸದ್ದು ಮಾಡುವುದು, ಸುಮ್ಮನೆ ನಕಲಿ ಗಡಿಬಿಡಿ ಮಾಡಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಾರಂತೆ. ಇದರಿಂದ ಜನರ ಗಮನ ತಮ್ಮತ್ತೆ ತಿರುಗುವಂತೆ ಮಾಡುತ್ತಾರೆ ಎಂದು ಸೋನು ಸೂದ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಬಾಲಿವುಡ್ ನಟರ ಅಶಿಸ್ತಿನ ಬಗ್ಗೆಯೂ ಸೋನು ಸೂದ್ ಮಾತನಾಡಿದ್ದಾರೆ, ‘ಕೆಲ ಬಾಲಿವುಡ್ ನಟರು, ಬೆಳಿಗ್ಗೆ ನಿಗದಿ ಆಗಿರುವ ಸಿನಿಮಾ ಶೂಟಿಂಗ್ಗೆ ಮಧ್ಯಾಹ್ನ 3 ಗಂಟೆಗೆ ಬರುತ್ತಾರೆ. ಆ ವರೆಗೆ ಬೇರೆ ನಟರು, ತಂತ್ರಜ್ಞರು ಎಲ್ಲ ಕಾಯುತ್ತಿರುತ್ತಾರೆ. ಅದರಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗುತ್ತದೆ. ಮಾತ್ರವಲ್ಲದೆ ನಿರ್ಮಾಪಕರು ಸಹ ವಿದೇಶಗಳಲ್ಲಿ ಶೂಟಿಂಗ್ ಇದ್ದರೆ 100 ಜನರನ್ನು ಕರೆದೊಯ್ಯುವ ಬದಲಿಗೆ 150-200 ಜನರನ್ನು ಕರೆದೊಯ್ಯುತ್ತಾರೆ. ಇದರಿಂದ ಅನವಶ್ಯಕ ಖರ್ಚುಗಳಾಗಿ ಸಿನಿಮಾದ ಬಜೆಟ್ ಕೈಮೀರಿ ಹೋಗುತ್ತದೆ’ ಎಂದಿದ್ದಾರೆ.