ಸಕ್ಕರೆ ಕಾಯಿಲೆ ತರಹ ರಕ್ತದ ಒತ್ತಡ ಕೂಡ ಒಮ್ಮೆ ಬಂದರೆ ಜೀವನಪರ್ಯಂತ ಕಾಡುವ ಕಾಯಿಲೆ ಯಾಗಿದೆ. ಇದನ್ನು ಕಂಟ್ರೋಲ್ ಮಾಡಿಕೊಳ್ಳ ಬಹುದೇ ಹೊರತು ಸಂಪೂರ್ಣವಾಗಿ ಇದರಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ.
ನಿದ್ದೆಯಲ್ಲಿ ಮಾತಾಡ್ತೀರಾ!? ಹಾಗಿದ್ರೆ ನಿಮಗೆ ಈ ಸಮಸ್ಯೆ ಇರೋದು ಗ್ಯಾರಂಟಿ!
ಹಾಗಾಗಿ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳು, ಆಹಾರ ಪದ್ಧತಿಯಲ್ಲಿ ಬದಲಾವಣೆಗಳು, ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದು, ಮಾನಸಿಕ ಒತ್ತಡ ನಿರ್ವಹಣೆ ಮಾಡಿ ಕೊಳ್ಳುವುದು ಇತ್ಯಾದಿಗಳನ್ನು ಅನುಸರಿಸುವುದು ಒಳ್ಳೆಯದು.
ಚಳಿಗಾಲದಲ್ಲಿ ಸ್ಕಿನ್ ಅಲರ್ಜಿಯಷ್ಟೇ ಅಲ್ಲದೇ ಹೃದ್ರೋಗಿಗಳು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಷ್ಟಕ್ಕೂ ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗೋದು ಏಕೆ ಅಂತ ನಿಮಗೆ ತಿಳಿದಿದ್ಯಾ? ಹಾಗಾದ್ರೆ ಈ ಸ್ಟೋರಿ ಓದಿ.
ತಾಪಮಾನ ಕಡಿಮೆಯಾದಾಗ, ರಕ್ತನಾಳಗಳು ಸಂಕುಚಿತಗೊಳ್ಳಬಹುದು. ಇದು ರಕ್ತ ಮತ್ತು ಆಮ್ಲಜನಕವನ್ನು ಜೋರಾಗಿ ಪಂಪ್ ಮಾಡಲು ಹೃದಯ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು.
ಆದರೆ ನೀವು ಜೀವನ ಶೈಲಿಯಲ್ಲಿ ಕೆಲವು ಸಿಂಪಲ್ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಹಠಾತ್ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಚಳಿಗಾಲದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ನೋಡೋಣ ಬನ್ನಿ.
ಚಳಿಗಾಲದಲ್ಲಿ ನೀವೇನಾದರೂ ಆರೋಗ್ಯದಿಂದ ಇರಲು ಬಯಸುವುದಾದರೆ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಆರಂಭಿಸಿ. ‘ವಿಟಮಿನ್ ಸಿ’ ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಯಾವ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಪ್ರಯೋಜನಕಾರಿ ಎಂಬುವುದನ್ನು ನಾವಿಂದು ತಿಳಿಯೋಣ ಬನ್ನಿ.
ಒಳಾಂಗಣ ಚಟುವಟಿಕೆಗಳು: ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ ತಂಪಾದ ವಾತಾವರಣದಿಂದ ನಿಮಗೆ ಹೊರಗೆ ಹೋಗಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಮನೆಯಲ್ಲಿಯೇ ಮಾಡಬಹುದಾದ ವ್ಯಾಯಾಮಗಳನ್ನು ಮಾಡಿ.
ನಿಯಮಿತ ವ್ಯಾಯಾಮವು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೂಡ ವ್ಯಾಯಾಮ ತುಂಬಾ ಒಳ್ಳೆಯದು. ನಿಮ್ಮ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ಈ ಎಲ್ಲಾ ಕೆಲಸಗಳನ್ನು ಮಾಡುವುದು ಬಹಳ ಮುಖ್ಯ.
ಆರೋಗ್ಯಕರ ಆಹಾರ: ಸಾಮಾನ್ಯವಾಗಿ ಚಳಿಗಾಲದಲ್ಲಿ ಅನೇಕ ಮಂದಿಯ ಆಹಾರ ಪದ್ಧತಿ ಬದಲಾವಣೆ ಆಗುತ್ತದೆ. ಆದರೆ ಈ ಸೀಸನ್ನಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದರ ಮೇಲೆ ಗಮನ ಹರಿಸಿ. ಹೆಚ್ಚುವರಿ ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದರಿಂದ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ.
ಜಲಸಂಚಯನ: ಸಾಮಾನ್ಯವಾಗಿ ಚಳಿಗಾಲದಲ್ಲಿ ಬಾಯಾರಿಕೆಯಾಗದ ಕಾರಣ ಅನೇಕ ಮಂದಿ ಹೆಚ್ಚಾಗಿ ನೀರು ಕುಡಿಯುವುದನ್ನೇ ಮರೆತು ಬಿಡುತ್ತಾರೆ. ಆದರೆ, ಈ ಸಮಯದಲ್ಲಿಯೂ ಹೆಚ್ಚಾಗಿ ನೀರು ಕುಡಿಯುವುದು ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾಗಿದೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ ನಿರ್ಜಲೀಕರಣವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ ಚೆನ್ನಾಗಿ ನೀರು ಕುಡಿಯಿರಿ.
ಒತ್ತಡ ನಿರ್ವಹಣೆ: ಚಳಿಗಾಲದಲ್ಲಿ ಒತ್ತಡದ ಸಮಸ್ಯೆಗಳು ಹೆಚ್ಚು. ಈ ಸಮಯದಲ್ಲಿ ಹೆಚ್ಚಾಗಿ ಆತಂಕ ಮತ್ತು ಮೂಡ್ ಸ್ವಿಂಗ್ ಉಂಟಾಬಹುದು. ಒತ್ತಡವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಪ್ರತಿದಿನ ಪ್ರಾಣಯಾಮ ಮತ್ತು ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವುದು ಬಹಳ ಮುಖ್ಯ. ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಚಳಿಗಾಲದೂದ್ದಕ್ಕೂ ಒಟ್ಟಾರೆ ಆರೋಗ್ಯದ ಕೆಲವು ಗಂಭೀರ ಪರಿಣಾಮ ಬೀರಬಹುದು.