ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶುಕ್ರವಾರ ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.
ಮೆಟ್ರೋ ಪ್ರಯಾಣಿಕರೇ ನಿಮಗೆ “ಸೋಮವಾರ” ಸಿಹಿ ಸುದ್ದಿ: ವಿಷಯ ತಿಳಿಯಲು ಈ ಸ್ಟೋರಿ ನೋಡಿ!
ಮೂರು ದಿನಗಳ ಕಾಲ ಕೊರೆಯುವ ಚಳಿಯಲ್ಲೇ ರಸ್ತೆಯಲ್ಲಿ ರಾತ್ರಿ ಇಡೀ ಮಲಗಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತರ ಹೋರಾಟ ಅಂತ್ಯಗೊಂಡಿದೆ. ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರ ಜೊತೆಗಿನ ಸಿಎಂ ಸಂಧಾನ ಯಶಸ್ವಿಯಾಗಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಚಳಿ, ಗಾಳಿ ಎನ್ನದೇ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಹಲವು ಭಾರೀ ಸಂಧಾನ ನಡೆಸಿ ಸುಸ್ತಾಗಿದ್ದ ಸರ್ಕಾರ, ಇದೀಗ ಆಶಾಕಾರ್ಯಕರ್ತೆಯರ ಮನವೊಲಿಸುವುದರಲ್ಲಿ ಕೊನೆಗೂ ಸಕ್ಸಸ್ ಆಗಿದೆ.
ಪ್ರತಿ ಗ್ರಾಮ, ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ತಲುಪಿಸುವ ಕೆಲಸ ಮಾಡ್ತಿದ್ದ ಆಶಾಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಮೈ ಕೊರೆವ ಚಳಿಯಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಆಶಾ ಕಾರ್ಯಕರ್ತೆಯರು ಸತತ ನಾಲ್ಕು ದಿನಗಳಿಂದ ಸಮಸ್ಯೆಗಳನ್ನ ಲೆಕ್ಕಿಸದೇ ಹೋರಾಟ ಮುಂದುವರಿಸಿದ್ದರು. ಸದ್ಯ ಇಷ್ಟು ದಿನ ಸಂಧಾನ ಮಾಡಿ ವಿಫಲವಾಗಿದ್ದ ಸರ್ಕಾರ, ಇದೀಗ ಕೊನೆಗೂ ಆಶಾ ಕಾರ್ಯಕರ್ತೆಯರ ಮನವೊಲಿಸೋದರಲ್ಲಿ ಸಕ್ಸಸ್ ಆಗಿದೆ. ಸದ್ಯ ಆಶಾಕಾರ್ಯಕರ್ತೆಯರ ಬೇಡಿಕೆಗಳಲ್ಲಿ ಒಂದಾಗಿದ್ದ ಗೌರವಧನ ಹೆಚ್ಚಳಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, 15 ಸಾವಿರ ರೂ. ಏರಿಕೆಗೆ ಇದ್ದ ಡಿಮ್ಯಾಂಡ್ನಲ್ಲಿ ಸದ್ಯ 10 ಸಾವಿರ ರೂ. ಕೊಡುವುದಕ್ಕೆ ಸರ್ಕಾರ ಓಕೆ ಅಂದಿರೋದು ಆಶಾಕಾರ್ಯಕರ್ತೆಯರಿಗೆ ಜಯ ಸಿಕ್ಕಂತಾಗಿದೆ.
ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಬೀಡುಬಿಟ್ಟಿದ್ದ ಆಶಾ ಕಾರ್ಯಕರ್ತೆಯರು, ಮೂಲ ಸೌಕರ್ಯ ಗಳಿಲ್ಲದೇ ಬಳಲಿ ಬೆಂಡಾಗಿ ಹೋಗಿದ್ದರು. ಅಲ್ಲದೇ ಪ್ರತಿಭಟನೆಗೆ ಬಂದಿದ್ದ ಹಲವು ಮಹಿಳೆಯರ ಆರೋಗ್ಯ ಕೂಡ ಹದಗೆಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಇದೀಗ ಕೊನೆಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಆಶಾಕಾರ್ಯಕರ್ತೆಯರ ಮುಖಂಡರ ಸಂಧಾನ ಸಕ್ಸಸ್ ಆಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸಂತಸ ತಂದಿಟ್ಟಿದೆ. ಸದ್ಯ ಗೌರವಧನವನ್ನ 10 ಸಾವಿರ ರೂಪಾಯಿ ನೀಡುವಂತೆ ಸೂಚನೆ ನೀಡಿರೋ ಸರ್ಕಾರ, ಇತರೆ ಬೇಡಿಕೆಗಳನ್ನ ಪರಿಶೀಲಿಸಿ ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.
ಇತ್ತ ಆಶಾ ಕಾರ್ಯಕರ್ತೆಯರ ಒಂದಷ್ಟು ಬೇಡಿಕೆ ಮಾತ್ರ ಈಡೇರಿರುವ ಸಂತಸ ಮನೆ ಮಾಡಿದರೆ, ಇತ್ತ ಆಶಾ ಕಾರ್ಯಕರ್ತೆಯರು ಇನ್ನೂ ಸಾಲು ಸಾಲು ಸಮಸ್ಯೆಗಳನ್ನ ಅನುಭವಿಸ್ತಿದ್ದು, ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಅಂತಾ ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ. ಇಡಿಗಂಟು, ಮೊಬೈಲ್ ವಿತರಣೆ ಸೇರಿ ಇತರೆ ಡಿಮ್ಯಾಂಡ್ಗಳನ್ನ ಕೂಡ ಸರ್ಕಾರ ಆದಷ್ಟು ಬೇಗ ಪರಿಹಾರ ಮಾಡಲಿ ಅನ್ನೋ ಒತ್ತಾಯ ಕೇಳಿಬರುತ್ತಿದೆ.