ಧಾರವಾಡ: ಕರ್ತವ್ಯ ನಿರತ ಯೋಧರೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
BY Vijayendra: ರಾಜ್ಯದ ಅಧ್ಯಕ್ಷನಾಗಿ ಪಕ್ಷವನ್ನು ಬಲಪಡಿಸಬೇಕು ಅಂತಾ ನನಗೂ ಇದೆ-ಬಿ.ವೈ ವಿಜಯೇಂದ್ರ
ಧಾರವಾಡದ ಗಿರಿನಗರದಲ್ಲಿರುವ ಹಾಗೂ ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಖುತ್ಬುದ್ದೀನ್ ಹಕ್ಕಿ ಎಂಬುವವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ಮನೆಯ ಕೀಲಿ ಮುರಿದು ಒಳನುಗ್ಗಿರುವ ಇಬ್ಬರು ಕಳ್ಳರು ಮನೆಯ ಅಲ್ಮೆರಾದಲ್ಲಿದ್ದ 110 ಗ್ರಾಂ ತೂಕದ ಚಿನ್ನಾಭರಣ, ಅರ್ಧ ಕೆಜಿಗೂ ಹೆಚ್ಚು ಬೆಳ್ಳಿ ಹಾಗೂ 30 ಸಾವಿರ ನಗದು ಸೇರಿ ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿಯೇ ಕಳ್ಳರು ಹೊಂಚು ಹಾಕಿ ಮನೆಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿ ಕಳ್ಳತನವಾಗಿದ್ದು ಗೊತ್ತಾದ ಕೂಡಲೇ ಅರುಣಾಚಲ ಪ್ರದೇಶದಿಂದ ಬಂದು ಯೋಧ ಖುತ್ಬುದ್ದೀನ್ ಅವರು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.