ಬೆಂಗಳೂರು: ಬೆಂಗಳೂರಿನ ಬಿಜೆಪಿ ಕಚೇತಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಜಿ ಶಾಸಕರು, ಪರಾಜಿತರ ಸಭೆ ನಡೆಸಿದ್ದೇವೆ.ನಾನು ಅಧ್ಯಕ್ಷನಾದ ಮೇಲೆ ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿ.ಪಂ., ತಾ.ಪಂ. ಚುನಾವಣೆ ಎದುರಿಸಬೇಕು ಅಂತಾ ಚರ್ಚೆ ಮಾಡಿದ್ದೇವೆ.
ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳು ಇರುತ್ತವೆ.ಅದೆಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ.ಯಡಿಯೂರಪ್ಪ ಸೇರಿ ಹಿರಿಯರು ಎಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ.ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ.ಇವತ್ತಿನ ಸಭೆ ಯಾವುದೇ ಬಲ ಪ್ರದರ್ಶನ, ಯಾರನ್ನೋ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಅಂತಾ ಮಾಡಿರುವುದಲ್ಲ.ಪಕ್ಷವನ್ನು ಬಲಪಡಿಸಲು ನಾನು ಚರ್ಚೆ ಮಾಡಿದ್ದೇವೆ.ರಾಜ್ಯದ ಅಧ್ಯಕ್ಷನಾಗಿ ಪಕ್ಷವನ್ನು ಬಲಪಡಿಸಬೇಕು ಅಂತಾ ನನಗೂ ಇದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.