ಬೆಂಗಳೂರು:- ಗೂಂಡಾಕಾಯ್ದೆಯಡಿ ಕುಖ್ಯಾತ ರೌಡಿಯನ್ನ ಹನುಮಂತನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಜಿತ್ @ ಕರಿಯಾ ರಾಜೇಶ್ ಬಂಧಿತ ಆರೋಪಿ. ಕರಿಯ ರಾಜೇಶ್ ಕೊಲೆ ಯತ್ನ, ಹಲ್ಲೆ, ದರೋಡೆಗೆ ಸಂಚು, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. 2016ರಿಂದಲೂ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು.
ಕರಿಯ ರಾಜೇಶ್ ಹನುಮಂತ ನಗರ ರೌಡಿಶೀಟರ್ ಕೂಡ ಆಗಿದ್ದು, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ NBW ವಾರೆಂಟ್ ಜಾರಿ ಮಾಡಿತ್ತು ನ್ಯಾಯಾಲಯ. ನಾಲ್ಕು ಪ್ರಕರಣಗಳಲ್ಲಿ NBW ವಾರೆಂಟ್ ಇಶ್ಯೂ ಮಾಡಲಾಗಿತ್ತು. ಕಮಿಷನರ್ ಸೂಚನೆ ಮೇರೆಗೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.
ಕರಿಯ ರಾಜೇಶ್ ನನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.