ಗದಗ:- ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಡ್ರೈವರ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಚಂದ್ರು ಲಮಾಣಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಕೆ!? ವಿರೋಧಿಗಳಿಗೆ ಬಿವೈ ಯಡಿಯೂರಪ್ಪ ಖಡಕ್ ಎಚ್ಚರಿಕೆ!
ಈ ಸಂಬಂಧ ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ವರ್ಷದಿಂದ ಮೃತ ಸುನಿಲ್ ನಮ್ಮ ಜೊತೆಗೆ ಇದ್ದ. ಡ್ರೈವರ್ ಅನ್ನೋದಕ್ಕಿಂತ ಸುನಿಲ್ ನಮ್ಮ ಸಂಬಂಧಿ. ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ.
ಆತ ಸೂಸೈಡ್ ಮಾಡಿಕೊಂಡ ಬಗ್ಗೆ ಬೆಳಗ್ಗೆ 10 :30 ಗಂಟೆ ಬಳಿಕ ನನಗೆ ಮಾಹಿತಿ ಸಿಕ್ತು. ಬೆಳಗ್ಗೆ ಮನೆ ಹತ್ತಿರ ಹೋಗಿ ನೋಡಿದಾಗ ವಿಷಯ ಗೊತ್ತಾಯ್ತು. ಅವರಿಗೆ ಅಂತಹ ದುಷ್ಮನ್ ಗಳು ಯಾರು ಇಲ್ಲ. ಸಧ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮೊಬೈಲ್ ವಶಕ್ಕೆ ಪಡೆದು ಇನ್ವೆಸ್ಟಿಗೇಷನ್ ನಡೀತಿದೆ.
ಇನ್ವೆಷ್ಟಿಗೇಷನ್ ಪ್ರೊಸಿಜರ್ ಲ್ಯಾಪ್ಸ್ ಆಗಿಲ್ಲ. ನಾನೂ ಪೊಲೀಸರಿಗೆ ಯಾವುದೇ ಸೂಚನೆ ಕೊಟ್ಟಿಲ್ಲ.. ನಿನ್ನೆ ಅಣ್ಣತಮ್ಮ ಇಬ್ಬರೇ ಮಾತ್ನಾಡಿದ್ದಾರೆ ಅಂತಿದ್ದಾರೆ. ಏನಿದೆ ಅಂತಾ ಸ್ಪಷ್ಟವಾಗಿ ಗೊತ್ತಿಲ್ಲ. ಅವನಿಗೆ ಬಯ್ಯೋದಕ್ಕೆ ಯಾರೂ ಹೋಗಿಲ್ಲ. ಪತ್ನಿಗೆ ಸಹೋದರನಾಗಬೇಕು. ಅವನು ಟ್ರಕ್ ಡ್ರೈವರ್ ಆಗಿದ್ದ ಪತ್ನಿ ಸರೋಜಾ ಅವರೇ ಆತನನ್ನ ಡ್ರೈವರ್ ಆಗಿ ಕರೆದುಕೊಂಡು ಬಂದಿದ್ದು, ಎಂಎಲ್ ಎ ಆಗುವದಕ್ಕಿಂತ ಮೊದಲಿನಿಂದಲೂ ನಮ್ಮ ಜೊತೆ ಇದ್ದಾನೆ.
ಮನೆ ಕಟ್ಟಿಸಿಕೊಳ್ಳಬೇಕೆಂದಿದ್ದ ಪಿಡಿಓ ಅವರಿಗೂ ಹೇಳಿದೆ. ಅವರ ತಂದೆ ತಾಯಿಗೆ ದುಡ್ಡು ಕೊಡ್ತಾ ಇರ್ತಿದ್ವಿ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದುರ ಬಗ್ಗೆ ತನಿಖೆ ಮೂಲಕ ಗೊತ್ತಾಗಲಿ ಎಂದು ಶಾಸಕ ಚಂದ್ರು ಲಮಾಣಿ ಹೇಳಿದ್ದಾರೆ.