ಕೊಡಗಿನ ಬೆಡಗಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಒಂದು ಬ್ಯಾಡ್ ನ್ಯೂಸ್ ಇದೆ. ನಟನೆ, ಫ್ಯಾಷನ್ ಜೊತೆ ಫಿಟ್ನೆಸ್ ಗೆ ಹೆಸರಾಗಿರುವ ರಶ್ಮಿಕಾ ಮಂದಣ್ಣಗೆ ನೋವಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ರಶ್ಮಿಕಾ ಗಾಯಗೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ
ಪುಷ್ಮಾ 2 ಸಕ್ಸಸ್ ನಂತ್ರ ರಶ್ಮಿಕಾ ಹಿಂದಿ ಸೇರಿದಂತೆ ಅನೇಕ ಸಿನಿಮಾಗಳಿಗೆ ಸೈನ್ ಹಾಕಿದ್ದಾರೆ. ಕೆಲ ಚಿತ್ರಗಳ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಮತ್ತೊಂದಿಷ್ಟು ಮುಗಿಯುವ ಹಂತದಲ್ಲಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ.
ಜಿಮ್ನಲ್ಲಿ ವರ್ಕೌಟ್ ಮಾಡುವಾಗ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಗೆ ಪೆಟ್ಟಾಗಿದೆ. ಹೀಗಾಗಿ ರಶ್ಮಿಕಾ ಒಪ್ಪಿಕೊಂಡಿದ್ದ ಸಲ್ಮಾನ್ ಖಾನ್ ಜೊತೆಗಿನ ‘ಸಿಖಂದರ್’ ಚಿತ್ರದ ಶೂಟಿಂಗ್ ಕೂಡ ನಿಲ್ಲಿಸಲಾಗಿದೆ.
ಮೂಲಗಳ ಪ್ರಕಾರ, ನಟಿ ರಶ್ಮಿಕಾಗೆ ಸಣ್ಣದಾಗಿ ಪೆಟ್ಟಾಗಿದೆ ಎನ್ನಲಾಗಿದೆ. ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ನಟಿ ಗಾಯಗೊಂಡಿದ್ದಾರೆ. ಆತಂತಪಡುವಂತಹದ್ದು ಏನಿಲ್ಲ. ಕೆಲ ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ
ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ರಶ್ಮಿಕಾ ಅವರು ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ನಟಿಯ ಕಡೆಯಿಂದ ಆರೋಗ್ಯದ ಬಗ್ಗೆ ಮಾಹಿತಿ ಸಿಗುತ್ತಾ? ಕಾಯಬೇಕಿದೆ. ಈ ವಿಚಾರ ತಿಳಿದು ಫ್ಯಾನ್ಸ್ ನಟಿಗೆ ಏನಾಯ್ತು ಎಂದು ಚರ್ಚಿಸುತ್ತಿದ್ದಾರೆ.
ಈ ಬಗ್ಗೆ ನಟಿ ಹೇಳಿದ ಬಳಿಕವಷ್ಟೇ ಸತ್ಯ ಸಂಗತಿ ತಿಳಿದು ಬರಲಿದೆ.