ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸಣ್ಣ ಮತ್ತು ದೊಡ್ಡ ಅಗತ್ಯಗಳನ್ನು ಪೂರೈಸಲು ಸಾಲವನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ಅದಲ್ಲದೆ ಕೆಲವೊಮ್ಮೆ ಸ್ನೇಹಿತರು ಅಥವಾ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಹಣವನ್ನು ಸಾಲ ನೀಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸಾಲ ನೀಡಿದ ಹಣ ಬರೋದೆ ಇಲ್ಲ. ಇದರಿಂದ ನಾವು ತುಂಬಾನೆ ಕಷ್ಟ ಎದುರಿಸಬೇಕಾಗಿ ಬರುತ್ತೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದ ಕಾರಣ ನಿದ್ರೆಯಿಲ್ಲದ ರಾತ್ರಿಗಳು, ಒತ್ತಡ ಹೆಚ್ಚುತ್ತದೆ. ಕೆಲವೊಂದು ಪರಿಹಾರಗಳನ್ನು ಮಾಡಿದರೆ ಸಿಕ್ಕಿಬಿದ್ದ ಹಣವನ್ನು ಮರಳಿ ಪಡೆಯಬಹುದು.
ಗಣೇಶನ ಪೂಜೆ
ಸಾಲ ಕೊಟ್ಟ ಹಣ ವಾಪಸ್ ಬರದಿದ್ದರೆ, ಪ್ರತಿದಿನ ಬೆಳಿಗ್ಗೆ ಗಣೇಶನ ಪೂಜೆ ಮಾಡಬೇಕು. ಪ್ರತಿನಿತ್ಯ ಗಣಪತಿಯನ್ನು ಪೂಜಿಸುವುದರಿಂದ ನಿಮ್ಮ ಬಾಕಿ ಹಣವು ನಿಮಗೆ ವಾಪಸ್ ಸಿಗುತ್ತದೆ ಮತ್ತು ನೀವು ಯಾರಿಂದಾದರೂ ಸಾಲ ತೆಗೆದುಕೊಂಡಿದ್ದರೆ ಕ್ರಮೇಣ ಅದು ಮರುಪಾವತಿಯಾಗಲು ಪ್ರಾರಂಭಿಸುತ್ತದೆ.
ಹನುಮಂತನ ಪೂಜೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರಿಗಾದರೂ ಕೊಟ್ಟ ಹಣವನ್ನು ಮರಳಿ ಪಡೆಯಲು ಹನುಮಂತನಿಗೆ ಕೆಂಪು ವಸ್ತ್ರವನ್ನು ಅರ್ಪಿಸಿ. ಇದರ ಜೊತೆಗೆ ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಲೇಪಿಸಿ. ನಿಮ್ಮ ಹಣವನ್ನು ಮರಳಿ ಪಡೆಯಲು ನಿಮ್ಮ ಕುಲದೇವತೆ ಮತ್ತು ದೇವಿಯನ್ನು ಆರಾಧಿಸಿ. ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ದಾನಕ್ಕಾಗಿ ಮೀಸಲಿಡಿ.
ವರ್ಷಗಳಾದರೂ ಸಾಲ ಹಿಂತಿರುಗಿಸದಿದ್ದರೆ
ನಿಮ್ಮ ಬಾಕಿ ಹಣವನ್ನು ವರ್ಷಗಳಾದರೂ ಹಿಂತಿರುಗಿಸದಿದ್ದರೆ, ಈ ಪರಿಹಾರವು ನಿಮಗೆ ಪರಿಣಾಮಕಾರಿಯಾಗಿದೆ. ಸ್ನಾನದ ನಂತರ ಪ್ರತಿದಿನ ಕನಿಷ್ಠ 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಿ. ಇದನ್ನು ಮಾಡುವುದರಿಂದ ನಿಮ್ಮ ಬಾಕಿ ಮೊತ್ತವನ್ನು ನೀವು ಮರಳಿ ಪಡೆಯಬಹುದು ಅಥವಾ ಕ್ರಮೇಣ ಹಿಂಪಡೆಯುವ ಮಾರ್ಗವನ್ನು ಪ್ರಾರಂಭಿಸಬಹುದು. ಇದಲ್ಲದೇ ಶ್ರೀ ಸೂಕ್ತ ಮಂತ್ರವನ್ನು ಪಠಿಸುವ ಮೂಲಕ ಸಾಲ ಪಡೆದ ಹಣವನ್ನು ಸಹ ಪಡೆಯಬಹುದು. ಇದಲ್ಲದೆ ಹನುಮಾನ್ ಚಾಲೀಸಾವನ್ನು 40 ದಿನಗಳ ಕಾಲ ನಿರಂತರವಾಗಿ ಪಠಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ನೀವು ಹಣವನ್ನು ಮರಳಿ ಪಡೆಯಬಹುದು.
ಸೂರ್ಯನನ್ನು ಪೂಜಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವರನ್ನು ಗೌರವದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಪೂಜಿಸುವುದರಿಂದ ನೀವು ಗೌರವ ಮತ್ತು ಸಂಪತ್ತನ್ನು ಪಡೆಯುತ್ತೀರಿ ಎಂದು ಹೇಳಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಸಿಂಧೂರವನ್ನು ಹಾಕಿ, ಪ್ರತಿದಿನ ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ, ನೀವು ಸಾಲವಾಗಿ ಕೊಟ್ಟ ಹಣವನ್ನು ಮರಳಿ ಪಡೆಯುತ್ತೀರಿ.