ಟಾಟಾ ಮೋಟಾರ್ಸ್ ತನ್ನ ಕಾರುಗಳ ಶ್ರೇಣಿಯನ್ನು ವಿಸ್ತರಿಸುವತ್ತ ಇನ್ನಷ್ಟು ಕಾರ್ಯೋನ್ಮುಖವಾಗಿದೆ. ಈಗಾಗಲೇ ತನ್ನ ಜನಪ್ರಿಯ ಮಾದರಿಗಳ ಫೇಸ್ಲಿಫ್ಟ್ ಆವೃತ್ತಿಯನ್ನು ಟಾಟಾ ಮಾರುಕಟ್ಟೆಗೆ ಪರಿಚಯಿಸಿದ್ದು, ತನ್ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಇದೀಗ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್ ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್ ಮಾಡಿದೆ.
Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್ಕಾಂಪ್ಯಾಕ್ಟ್ ಎಸ್ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್ 1,90,855 ಮಾರಾಟವಾದರೆ ಟಾಟಾ ಪಂಚ್ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಯಾವ ಕಾರು ಎಷ್ಟು ಮಾರಾಟ
1. ಟಾಟಾ ಪಂಚ್ (SUV) – 2,02,030
2. ವ್ಯಾಗನ್ ಆರ್(Hatchback) – 1,90,855
3. ಮಾರುತಿ ಎರ್ಟಿಗಾ(MUV) – 1,90,091
4. ಮಾರುತಿ ಬ್ರೀಜಾ (SUV) – 1,88, 160
5. ಹುಂಡೈ ಕ್ರೇಟಾ (SUV) – 1,86,919
ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್ ಎಸ್ಯುವಿ, ಎಸ್ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.
2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟವಾಗಿದ್ದು ಮಾರುತಿ ಕಾರುಗಳ ಮಾರುಕಟ್ಟೆ 41%ಕ್ಕೆ ಕುಸಿದಿದೆ. ವಿಶೇಷವಾಗಿ 10 ಲಕ್ಷ ರೂ. ಒಳಗಿನ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಇರುವುದರಿಂದ ಮಾರುತಿ ಕಾರುಗಳ ಮಾರುಕಟ್ಟೆ ಕುಸಿತವಾಗಿದೆ. 2018 ರಲ್ಲಿ ಭಾರತದಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಸಂದರ್ಭದಲ್ಲಿ ಟಾಪ್-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.
ಯಾವ ಕಂಪನಿಯ ಕಾರುಗಳಿಗೆ ಮೊದಲ ಸ್ಥಾನ?
1957 – 1984 : ಅಂಬಾಸಿಡರ್( ಹಿಂದೂಸ್ಥಾನ್ ಮೋಟಾರ್ಸ್)
1985-2004 – ಮಾರುತಿ 800
2005-2017 – ಮಾರುತಿ ಅಲ್ಟೋ
ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
2018 – ಮಾರುತಿ ಡಿಸೈರ್ – 2,64,612
2019 – ಮಾರುತಿ ಅಲ್ಟೋ – 2,08,087
2020 – ಮಾರುತಿ ಸ್ವಿಫ್ಟ್ – 1,60,765
2021 – ಮಾರುತಿ ವ್ಯಾಗನ್ ಆರ್ – 1,83,851
2022 – ಮಾರುತಿ ವ್ಯಾಗನ್ ಆರ್ – 2,17,317
2023 – ಮಾರುತಿ ಸ್ವಿಫ್ಟ್ – 2,03,469
2024 – ಟಾಟಾ ಪಂಚ್ – 2,02,030