ಕೋಲಾರ:- ಕೋಲಾರ ಜಿಲ್ಲೆಯಾದ್ಯಂತ ಇಂದು ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ.
ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇಗುಲದಲ್ಲಿ ವೈಭವ ಮನೆ ಮಾಡಿದ್ದು, ವಿವಿಧ ಪುಷ್ಪಾಲಂಕಾರದಿಂದ ಬಾಲಾಜಿ ಕಂಗೊಳಿಸುತ್ತಿದ್ದಾನೆ. ಶ್ರೀನಿವಾಸನ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ.- ಗೋವಿಂದನ ನಾಮಸ್ಮರಿಸಿ ದರ್ಶನ ಪಡೆದು ಭಕ್ತಗಣ ಪುಳಕಿತರಾಗುತ್ತಿದ್ದಾರೆ.
ಸ್ವರ್ಗ ಪ್ರಾಪ್ತಿಯ ನಂಬಿಕೆಯಿರುವ ವೈಕುಂಠ ದ್ವಾರದಿಂದ ಭಕ್ತರು ನಿರ್ಗಮನ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.