ಗಂಭೀರ್ ಒಬ್ಬ ಮೋಸಗಾರ ಎಂದು ಮುಖ್ಯ ಕೋಚ್ ವಿರುದ್ಧ ಸ್ಟಾರ್ ಕ್ರಿಕೆಟರ್ ಆಕ್ರೋಶ ಹೊರ ಹಾಕಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ವೃತ್ತಿಜೀವನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅಷ್ಟೇ ಅಲ್ಲ ಟೀಮ್ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಹೊಣೆ ಅನ್ನೋ ಚರ್ಚೆ ಜೋರಾಗಿದೆ. ಈಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೌತಮ್ ಗಂಭೀರ್ ಮೋಸಗಾರ. ಅವನು ಹೇಳಿದಂತೆ ಯಾವತ್ತೂ ನಡೆದುಕೊಳ್ಳುವುದೇ ಇಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲಿಯವರು? ಅಭಿಷೇಕ್ ನಾಯರ್ ಎಲ್ಲಿಂದ ಬಂದವರು? ಎಲ್ಲರೂ ಮುಂಬೈನವರೇ. ಇವರನ್ನು ಮುಂದೆ ತರುವ ಅವಕಾಶ ಸಿಕ್ಕಿತ್ತು. ಜಲಜ್ ಸಕ್ಸೇನಾ ಪರ ಮಾತನಾಡಲು ಯಾರೂ ಇಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಮೌನವಾಗಿರುತ್ತಾರೆ ಎಂದರು.
ಬೌಲಿಂಗ್ ಕೋಚ್ನಿಂದ ಏನು ಪ್ರಯೋಜನ? ಇವರು ಕೋಚ್ ಏನೇ ಹೇಳಿದ್ರೂ ಒಪ್ಪುತ್ತಾರೆ. ಮೋರ್ನೆ ಮೊರ್ಕೆಲ್ ಲಕ್ನೋ ಸೂಪರ್ ಜೈಂಟ್ಸ್ನಿಂದ ಬಂದವರು. ಕೆಕೆಆರ್ನಲ್ಲಿ ಅಭಿಷೇಕ್ ನಾಯರ್ ಗಂಭೀರ್ ಜೊತೆಗಿದ್ದರು. ಇವರು ಯಾರು ಗಂಭೀರ್ಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದರು.