ಹುಬ್ಬಳ್ಳಿ: ಕಾಂಗ್ರೆಸ್ ಬೆಂಬಲಿತ ದಲಿತಪರ ಮತ್ತು ವಿವಿಧ ಸಂಘಟನೆಗಳು ಇಂದು ಹುಬ್ಳಳ್ಳಿ-ಧಾರವಾಡ ಅವಳಿ ನಗರಗಳ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪಡಬಾರದ ಕಷ್ಟ ಪಟ್ಟರು. ಕೂಲಿ ನಾಲಿ ಮಾಡಿಕೊಂಡು ಬದುವವರು ಉದ್ಯೋಗ ಹಾಗೂ ಊಟಕ್ಕೋ ಅನ್ನ ಸಿಗದೇ ನಲುಗಿ ಹೋದರು. ಧಾರವಾಡದಲ್ಲಿ ಬೀದಿ ಬದಿ ಇಡ್ಲಿ ಮಾರಾಟ ಮಾಡಿ ಬದುಕುವ ಬಡ ವ್ಯಾಪಾರಿಗೆ ಕಪಾಳ ಮೋಕ್ಷ ಮಾಡಿದ್ದು ಕಾನೂನು ಮಹಾವಿದ್ಯಾಲಯಕ್ಕೆ ನುಗ್ಗಿ ಕಾಲೇಜು ಬಂದ್ ಮಾಡಬೇಕು ಇಲ್ಲದಿದ್ದರೆ ಗಾಜು ಪುಡಿ ಪುಡಿ ಮಾಡುವ ಬೆದರಿಕೆ ಹಾಕಿದ್ದಾರೆ.
ಏಪ್ರಿಲ್ ನಲ್ಲಿ ಕಾಂಗ್ರೆಸ್ ಸರ್ಕಾರ ಬೀಳೋದು ಶತಃ ಸಿದ್ಧ: ರೇಣುಕಾಚಾರ್ಯ!
ಇನ್ನೊಂದು ಕಡೆ ಅಂದೇ ದುಡಿದು ಅಂದೇ ತಿನ್ನುವ ಜನರು ಕೆಲಸಕ್ಕೆ ಹೋಗಲು 10 ರಿಂದ 12 ಕಿಲೋ ಮೀಟರ್ ನಡೆದುಕೊಂಡೇ ಹೋಗಿದ್ದು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. .ಇನ್ನು ಒತ್ತಾಯ ಪೂರ್ವಕವಾಗಿ ಅಟೋ ಸಂಚಾರ ಸ್ಥಗಿತ ಮಾಡಿ ಅಟ್ಟ ಹಾಸ ಮೆರೆದರು. ಪೊಲೀಸ್ ಕಮೀಶನರ್ ಹೇಳುವ ಪ್ರಕಾರ ಶಾಲ ಕಾಲೇಜುಗಳು ಸಹ ನಡೆಯುತ್ತಿಲ್ಲ. ಹುಬ್ಬಳ್ಳಿ ನಗರದ ಪ್ರದೇಶವೊಂದರಲ್ಲಿ ಆಟೋರಿಕ್ಷಾವೊಂದು ಸವಾರಿಗಳನ್ನು ಹೇರಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಪ್ರತಿಭಟನೆಕಾರು ‘ಹೇ ನಿಲ್ಸು’ ಅಂತ ವಾಹನದ ಕಡೆ ಓಡುತ್ತಾರೆ.
ಆದರೆ, ಆಟೋರಿಕ್ಷಾ ಚಾಲಕ ಎದ್ನೋ ಬಿದ್ನೋ ಅಂತ ತನ್ನ ವಾಹನವನ್ನು ಬೇರೊಂದು ದಿಕ್ಕಿಗೆ ತಿರುಗಿಸಿ ಪರಾರಿಯಾಗುತ್ತಾನೆ. ಅದರ ಹಿಂದೆ ಓಡಲಾಗದ ಪ್ರತಿಭಟನೆಕಾರರು ವಾಪಸ್ಸು ಬಂದ ಘಟನೆ ಸಹ ನಡೆಯಿತು. ಇನ್ನೊಂದು ಕಡೆ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳು ಆಸ್ಪತ್ರೆಗೆ ಹೋಗಲು ಸಹ ತೀವ್ರ ಸ್ವರೂಪದ ತೊಂದರೆ ಪಡಬೇಕಾಯಿತು.
ಆದರೆ ಭಾರತಿ ಎಂಬ ಉದ್ಯೋಗಸ್ಥ ಮಹಿಳೆ ಹಾಗೂ ನಜೀರ್ ಎಂಬ ಕೂಲಿ ಕಾರ್ಮಿಕರ ಬಂದ್ ಕುರಿತು ಆಕ್ರೋಶ ವ್ಯಕ್ತಪಡಿಸಿದರು