ವಿಜಯಪುರ:-ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಳಿ ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಜರುಗಿದೆ.
ಎಲ್ಲವೂ ದುಬಾರಿ: ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಸಾರಿಗೆ ಇಲಾಖೆ: ಇಂದಿನಿಂದ ಬಿಎಂಟಿಸಿ ಪಾಸ್ಗಳ ದರ ಏರಿಕೆ!
ಬಸಯ್ಯ ಹಿರೇಮಠ ಎಂಬವರಿಗೆ ಸೇರಿದ ಓಮಿನಿ ವಾಹನ ಸುಟ್ಟು ಭಸ್ಮವಾಗಿದೆ. ಉಕ್ಕಲಿ ಗ್ರಾಮದಿಂದ ಸಂಬಂಧಿಕರನ್ನು ಕರೆದುಕೊಂಡು ಎಡೆಯೂರುಗೆ ಹೊರಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನದಲ್ಲಿದ್ದವರು ಕೆಳಗಿಳಿದಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬರುವ ಮೊದಲೆ ವಾಹನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.