ಕನ್ನಡ ಚಿತ್ರರಂಗದ ಅದ್ಭುತ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಹರಿಪ್ರಿಯಾಗೆ ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ತುಂಬು ಗರ್ಭಿಣಿಯಾಗಿರುವ ಹರಿಪ್ರಿಯಾ ಕೆಲವೇ ದಿನಗಳಲ್ಲಿ ಮುದ್ದಾದ ಮಗವಿಗೆ ಜನ್ಮ ನೀಡಲಿದ್ದಾರೆ. ಇದೀಗ ವಸಿಷ್ಠ ಸಿಂಹ 2 ತಿಂಗಳ ಮೆಟರ್ನಿಟಿ ಲೀವ್ ತೆಗೆದುಕೊಂಡು ಸದಾ ಪತ್ನಿ ಜೊತೆಗಿದ್ದು ಕೇರ್ ಮಾಡಲು ಮುಂದಾಗಿದ್ದಾರೆ.
‘ನಾನು ಎರಡು ತಿಂಗಳುಗಳ ಕಾಲ ಪೆಟರ್ನಿಟಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿರುವೆ‘ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ. ಮಾಲ್ಡೀವ್ಸ್ ಟ್ರಿಪ್ನಲ್ಲಿ ಸೆರೆ ಹಿಡಿದಿರುವ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಾವು ಪೋಷಕರಾಗುತ್ತಿರುವ ಮಾಹಿತಿಯನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನೀಡಿದ್ದರು.
‘ಸಮಯ ಬಲು ಬೇಗ ಸಾಗುತ್ತಿದೆ. ಅದೆಷ್ಟೋ ಅಮೂಲ್ಯವಾದ ಕ್ಷಣಗಳನ್ನು ನಾನು ಮಿಸ್ ಮಾಡಿಕೊಂಡಿರುವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹರಿಪ್ರಿಯಾ ಸಾಕಷ್ಟು ಬದಲಾವಣೆಗಳನ್ನು ಎದುರಿಸುತ್ತಿದ್ದಳು. ಈ ಸಮಯದಲ್ಲಿ ಆಕೆ ಪರ ನಿಂತುಕೊಂಡು ನಾನು ಸಪೋರ್ಟ್ ಮಾಡಲು ಆಗಲಿಲ್ಲ ಏಕೆಂದರೆ ನನ್ನ ಕೆಲಸ ಕಮಿಟ್ಮೆಂಟ್ ಹೆಚ್ಚಿತ್ತು. ಎರಡನೇ ಟ್ರೈಮಿಸ್ಟರ್ ಸಮಯದಿಂದ ನಾನು ಹರಿಪ್ರಿಯಾ ಜೊತೆ ಹೆಚ್ಚಿಗೆ ಸಮಯ ಕಳೆದಿರುವೆ. ನನಗೆ ಖುಷಿ ಇದೆ ಸಮಯ ಕೊಟ್ಟಿರುವೆ ಎಂದು. ಮೊದಲ ಸ್ಕ್ಯಾನ್ನಿಂದ ಹಿಡಿದು ಮೊದಲ ಬೇಬಿ ಕಿಕ್ವರೆಗೂ ನಾನು ಪ್ರತಿಯೊಂದನ್ನು ತುಂಬಾ ಖುಷಿಯಿಂದ ಎಂಜಾಯ್ ಮಾಡಿದ್ದೀನಿ‘ ಎಂದು ಸಂದರ್ಶನದಲ್ಲಿ ವಸಿಷ್ಠ ಸಿಂಹ ಹೇಳಿದ್ದಾರೆ.
‘ಪಾರ್ಟನರ್ ಅಗಿ ಹರಿಪ್ರಿಯಾ ಪ್ರೆಗ್ನೆಂಟ್ ಆಗಿ ಎದುರಿಸುವ ಮೂಡ್ ಸ್ವಿಂಗ್, ನೋವು ಮತ್ತು ರಾತ್ರಿ ನಿದ್ರೆ ಇಲ್ಲದ ಸಮಯದಲ್ಲಿ ನಾನು ಆಕೆ ಪರವಾಗಿ ನಿಂತಿದ್ದೆ. ಗರ್ಭಿಣಿ ಆದಾಗ ಹೆಣ್ಣು ಮಕ್ಕಳು ಎದುರಿಸುವ ಬದಲಾವಣೆಗಳ ಬಗ್ಗೆ ಈಗ ಬಹಳ ಹತ್ತಿರದಿಂದ ನೋಡಿದ್ದೀನಿ. ಪ್ರತಿಯೊಬ್ಬ ಹೆಣ್ಣಿಗೂ ಹ್ಯಾಟ್ಸ್ ಆಫ್ ಹೇಳಬೇಕು. ಹೀಗಾಗಿ ನಾನು ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೀನಿ. ಪ್ರತಿಯೊಬ್ಬ ಗಂಡಸು ಬ್ರೇಕ್ ತೆಗೆದುಕೊಂಡು ತಾಯಿ ಮತ್ತು ಮಗುವಿನ ಜೊತೆ ಸಮಯ ಕಳೆಯಬೇಕು. ನನ್ನ ತಾಯಿ ಅನಾರೋಗ್ಯದ ಸಮಯದಲ್ಲಿ ನನ್ನ ತಂದೆ ಎಷ್ಟು ಕಾಳಜಿ ವಹಿಸಿ ನೋಡಿಕೊಂಡರು ಎಂದು ನಾನು ಕಣ್ಣಾರೆ ನೋಡಿದ್ದೀನಿ. ಫ್ಯಾಮಿಲಿಯನ್ನು ನೋಡಿಕೊಳ್ಳುವುದು ಸುಂದರ ಸಮಯ‘ ಎಂದು ವಸಿಷ್ಠ ಸಿಂಹ ತಿಳಿಸಿದ್ದಾರೆ.