ಬೆಂಗಳೂರು:- ಎಸ್ಸಿ-ಎಸ್ಟಿ ಶಾಸಕರ ಡಿನ್ನರ್ ಮೀಟಿಂಗ್ ಮುಂದೂಡಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಕಿ ಅವಘಡ: ನಾಲ್ಕು ಮಂದಿ ಜೀವ ಕಾಪಾಡಿದ ಸಾಕು ನಾಯಿ.. ಗಂಗಾವತಿಯಲ್ಲಿ ಮನಮಿಡಿಯುವ ಸ್ಟೋರಿ!
ಈ ಸಂಬಂಧ ಮಾತನಾಡಿದ ಅವರು, ಡಿನ್ನರ್ ಹೊಸತೇನು ಅಲ್ಲ, ನಮ್ಮಲ್ಲಿ ಮುಸುಕಿನ ಗುದ್ದಾಟ ಎನಿಲ್ಲ ಎಂದರು. ಯಾರು ಕರೆದಿದ್ರು ಅವರನ್ನೇ ಕೇಳಬೇಕು. ಕರೆದಿದ್ದರೆ ನಾವು ಭಾಗವಹಿಸುತ್ತಿದ್ದೆವು. ಸಭೆಗೆ ನಾವು ಆಹ್ವಾನಿತರಷ್ಟೇ. ಸರಿಯಾದ ಪರ್ಸನ್ ಕೇಳಿದ್ರೆ ಗೊತ್ತಾಗುತ್ತೆ. ಸಭೆಗೆ ನನ್ನನ್ನ ಕರೆದಿದ್ದರು. ಏನು ಚರ್ಚೆಯಾಗ್ತಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್ ಜೊತೆ ನಾನು ಮಾತನಾಡಿಲ್ಲ. ಪಕ್ಷ ಒಂದೇ ಇದೆ. ಎಲ್ಲರೂ ಇದ್ದೇವೆ. ರಾಜಕೀಯ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡೇ ಬರಬೇಕು ಎಂದು ತಿಳಿಸಿದ್ದಾರೆ.
ಸಭೆ ಕರೆದವರೂ ಅಲ್ಲ ಡೆಲ್ಲಿಗೆ ಹೋದವರು ಅಲ್ಲ. ಇದರ ಬಗ್ಗೆ ಹೇಳಿದರೆ, ಮತ್ತೇನೋ ಆಗುತ್ತೆ. ಮತ್ತೆ ಯಾವಾಗ ಮಾಡ್ತಾರೆ ಕೇಳ್ತೇವೆ. ಡಿನ್ನರ್ ಹೊಸದೇನು ಅಲ್ಲ. ಮುಸುಕಿನ ಗುದ್ದಾಟ ಏನೂ ಇಲ್ಲ. ಹೈಕಮಾಂಡ್ ಪರ್ಮಿಷನ್ ಹೋಂ ಮಿನಿಸ್ಟರ್ ತೆಗೆದುಕೊಳ್ತಾರೆ. ಆಮೇಲೆ ಸಭೆಯ ಬಗ್ಗೆ ನೋಡೋಣ. ಸಮಸ್ಯೆ ಉದ್ಭವವಾದಾಗ ಕೇಳಬೇಕಲ್ಲ. ಹೈಕಮಾಂಡ್ ಹತ್ತಿರವೇ ಕೇಳೋಣ ಎಂದಿದ್ದಾರೆ.