ಕೋಲಾರ – ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ನೇಮಕಾತಿಯಲ್ಲಿ ಯಾರ ಹತ್ತಿರ ಒಂದು ರೂಪಾಯಿ ಲಂಚ ತೆಗೆದುಕೊಳ್ಳದೇ ಪಾರದರ್ಶಕತೆಯಿಂದ ನೇಮಕಾತಿ ಆದೇಶ ಪತ್ರ ನೀಡಿದ್ದೇವೆ ಅದೇ ರೀತಿಯಲ್ಲಿ ನೀವುಗಳು ಅಷ್ಟೇ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ: ಅಮರಶಿಲ್ಪಿ ಜಾಕಣಾಚಾರಿ ಶಿಲ್ಪಕಲೆಗಳಲ್ಲಿ ಇನ್ನೂ ಜೀವಂತ – ಡಿಸಿ ಎಂ. ಆರ್. ರವಿ
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ 7 ಕಾರ್ಯಕರ್ತರಿಗೆ ಹಾಗೂ 53 ಸಹಾಯಕರಿಗೆ ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಅವರು ಹಿಂದೆ ಎಲ್ಲಾ ಅಂಗನವಾಡಿ ನೌಕರರ ನೇಮಕಾತಿಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿದ್ದು ಪ್ರಮಾಣಿಕರಿಗೆ, ಅರ್ಹತೆ ಇರುವವರಿಗೆ ಅವಕಾಶ ಸಿಗುತ್ತಿರಲಿಲ್ಲ ಅ ರೀತಿಯಲ್ಲಿ ನಡೆಯಬಾರದು ಎಂದು ಮೆರಿಟ್ ಆಧಾರದಲ್ಲಿ ಅರ್ಹತೆ ಇದ್ದವರಿಗೆ ಅವಕಾಶ ನೀಡಲಾಗಿದೆ ತಾವುಗಳು ಕೈ ಬಾಯಿ ಶುದ್ದವಾಗಿ ಇಟ್ಟುಕೊಂಡು ಕೆಲಸ ಮಾಡಿ ಅಂಗನವಾಡಿಗೆ ಬರುವ ಮಕ್ಕಳು ಬಡವರು ಅವರನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಣೆ ಮಾಡುವಂತೆ ಸಲಹೆ ನೀಡಿದರು.