ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿರುವ ಪ್ರಸಂಗ ಬೆಳಕಿಗೆ ಬರುತ್ತಿವೆ. ಅದರಂತೆಯೇ ಮತ್ತೊಂದು ಘಟನೆ ಇದೀಗ ವರದಿಯಾಗಿದೆ. ಕಿಡಿಗೇಡಿಯೋರ್ವ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ ಮೆರೆದಿದ್ದಾನೆ.
ಹೌದು ಕಾರಿನ ಚಾಲಕನನ್ನು ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಮಾಹಿತಿ ದೊರೆತಿದೆ.
ವಯಸ್ಸು 18 ಆಯ್ತಾ..? ಪುರುಷರೇ ಈ ಪರೀಕ್ಷೆಯನ್ನು ನೀವು ಮಾಡಿಸಿಕೊಳ್ಳಲೇಬೇಕು!
ಬೆಂಗಳೂರಿನ, ಕೋರಮಂಗಲದ ಬಳಿಯಲ್ಲಿ ಘಟನೆ ನಡೆದಿದ್ದು. ಕ್ಯಾಬ್ನ್ನು ಫಾಲೋ ಮಾಡಿಕೊಂಡು ಬಂದ ಪುಂಡ ಯುವಕರ ಗುಂಪು ಕಾರಿನ ಬ್ಯಾನೆಟ್ ಮೇಲೆ ಹತ್ತಿ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ಯುವಕರ ಪುಂಡಾಟದಿಂದ ಕಾರಿಗೆ ಡ್ಯಾಮೇಜ್ ಆಗಿರುವುದು ಕಂಡು ಬಂದಿದೆ. ಡಿಸೆಂಬರ್ 28ರಂದು ಕೋರಮಂಗಲ ಬಳಿ ನಡೆದ ಘಟನೆಯಾಗಿದೆ.