ಆಕೆ ಬೆಳಿಗ್ಗೆ ಎದ್ದು ಮನೆ ಸ್ವಚ್ಛತೆ ಕೆಲಸ ಮುಗಿಸಿ ಸ್ನಾನಕ್ಕೆ ಅಂತ ಹಿತ್ತಲಿಗೆ ಹೋಗಿದ್ಲು. ಇನ್ನೇನು ಸ್ನಾನ ಮಾಡಬೇಕು ಅನ್ನೊಷ್ಟರಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ರಾಡ್ ನಿಂದ ಹೊಡೆದಿದ್ದಾರೆ. ಬಲವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ರಾವದಿಂದ ಪ್ರಾಣ ಪಕ್ಷಿ ಹಾರಿಹೋಗಿದೆ. ಮಹಿಳೆ ಸಾವಿನ ಹಿಂದೆ ಹತ್ತಾರು ಅನುಮಾನ ಹುಟ್ಟಿಕೊಂಡಿವೆ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.
ಹೌದು, ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ. ಬೆಳಿಗ್ಗೆ ಎದ್ದು ಮನೆ ಕೆಲಸ ಮುಗಿಸಿ ಇನ್ನೇನು ಸ್ನಾನ ಮಾಡಬೇಕು ಅಂತ ಹಿತ್ತಲಿಗೆ ಹೋದ ಮಹಿಳೆಗೆ ಹೆಣವಾಗಿ ಬಿದಿದ್ದಾಳೆ. ಇಲ್ಲಿ ಶವವಾಗಿ ಬಿದ್ದಿರೋ ಮಹಿಳೆಯ ಹೆಸರು ಶೋಭಾ ಪರಶುರಾಮ ಮಾಂಗ್ ವಯಸ್ಸು 40 ವರ್ಷ. ಶೋಭಾ ಸ್ನಾನ ಮಾಡುವಾಗಲೇ ಯಾರೋ ದುಷ್ಕರ್ಮಿಗಳು ಕಬ್ಬಿನದ ರಾಡ್ ನಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ.
ತಲೆಗೆ ಗಂಭೀರವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ತ್ರಾವದಿಂದ ಕ್ಷಣಾರ್ಧದಲ್ಲಿ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಆರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಯಸ್ಸು 18 ಆಯ್ತಾ..? ಪುರುಷರೇ ಈ ಪರೀಕ್ಷೆಯನ್ನು ನೀವು ಮಾಡಿಸಿಕೊಳ್ಳಲೇಬೇಕು!
ಇನ್ನು ಮೃತ ಶೋಭಾಗೆ ಇಬ್ಬರು ಗಂಡು ಒಬ್ಬ ಹೆಣ್ಣು ಮಗಳಿದ್ದಾಳೆ. ಹೆಣ್ಣು ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದ್ದಾರೆ. 8 ವರ್ಷಗಳ ಹಿಂದೆ ಈಕೆಯ ಪತಿ ತೀರಿಕೊಂಡಿದ್ದಾರೆ. ಮನೆಯಲ್ಲಿ ಇಬ್ಬರು ಗಂಡು ಮಕ್ಕಳ ಜೊತೆ ವಾಸ ಮಾಡ್ತಿದ್ಲು. ಬೆಳಿಗ್ಗೆ ಮನೆಯಲ್ಲಿ ಯಾರೂ ಇರಲಿಲ್ಲ. ತಾನು ಕೆಲಸ ಮುಗಿಸಿ ಸ್ನಾನಕ್ಕೆ ಹೋದಾಗ ಅಪರಿಚಿತರು ಹಲ್ಲೆ ಮಾಡಿದ್ದಾರೆ.
ಇನ್ನು ಈಕೆಯ ಹೇಳೋದು ಏನಂದ್ರೆ, ನಮಗೂ ನಮ್ಮ ಚಿಕ್ಕಪ್ಪನ ಮಕ್ಕಳಿಗೂ ಆಸ್ತಿ ವಿಚಾರಕ್ಕೆ ಆಗಾಗ್ಗೆ ಜಗಳ ನಡೀತಿತ್ತು. ಈ ಹಿಂದೆಯೂ ನಮ್ಮ ತಾಯಿಯ ಮೇಲೆ ಹಲ್ಲೆ ಮಾಡಿದ್ರು. ಈಗಲೂ ಅವರೇ ಮಾಡಿರಬೇಕು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ತಿ ವಿಚಾರವೋ ಅಥವಾ ಮತ್ತಿನ್ನೇನೋ ಒಟ್ಟಿನಲ್ಲಿ ಅಪರಿಚಿತರ ಹಲ್ಲೆಯಿಂದ ಮಹಿಳೆ ಪ್ರಾಣ ಹೋಗಿದೆ. ಪೊಲೀಸ್ ಎಲ್ಲ ಆಯಾಮಗಳಲ್ಲಿ ತನಿಖೆ ಶುರುಮಾಡಿದ್ದು. ತನಿಖೆಯಿಂದಲೇ ಘಟನೆ ಹಿಂದಿನ ಅಸಲಿಯತ್ತು ಹೊರಬರಬೇಕಿದೆ.